ಪೂರ್ಣಪ್ರಜ್ಞ ಕಾಲೇಜು ಉಡುಪಿ ಎನ್.ಎಸ್.ಎಸ್. ಶಿಬಿರ

ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟಿçÃಯ ಸೇವಾ ಯೋಜನೆಯ ಸಹಯೋಗದಲ್ಲಿ ಪೂರ್ಣಪ್ರಜ್ಞ ಕಾಲೇಜು ಉಡುಪಿಯ ರಾಷ್ಟಿçÃಯ ಸೇವಾಯೋಜನೆಯ ಘಟಕವು ಬ್ರಹ್ಮಾವರ ತಾಲೂಕಿನ ನೀಲಾವರ ಗೋಶಾಲೆಯಲ್ಲಿ ವಾರ್ಷಿಕ ಶಿಬಿರವನ್ನು ಹಮ್ಮಿಕೊಂಡಿರುತ್ತದೆ. ಈ ವಾರ್ಷಿಕ ಶಿಬಿರದಲ್ಲಿ ಘಟಕ- ೧ ಮತ್ತು ಘಟಕ-೨ ರಿಂದ ಒಟ್ಟು ೯೧ ಜನ ಮಕ್ಕಳು ಭಾಗವಹಿಸಿದ್ದಾರೆ. ಶಿಬಿರದ ಉದ್ಘಾಟನೆಯನ್ನು ೧೮.೦೫.೨೦೨೨ರಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕರಾದ ಡಾ. ವಿನಯ್‌ಕುಮಾರ್ ಡಿ. ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಯಾಗಿ ಕಲಿತಂತಹ ಮೌಲ್ಯಗಳನ್ನು ಕುರಿತು ಹಂಚಿಕೊAಡರು. ವೇದಿಕೆಯಲ್ಲಿ ಘಟಕ- ೧ ರ ಯೋಜನಾಧಿಕಾರಿಗಳಾದ ಶ್ರೀ ಸಂದೀಪ್, ಘಟಕ- ೨ ರ ಯೋಜನಾಧಿಕಾರಿಗಳಾದ ಶ್ರೀ ಸುಪರ್ಣ, ಸಹಾಯಕ ಯೋಜನಾಧಿಕಾರಿಗಳಾದ ಡಾ. ನಾಗರಾಜ್, ದೀಕ್ಷಾ ಅವರು ಇದ್ದರು. ವಿದ್ಯಾರ್ಥಿ ನಾಯಕರು ಈ ಉದ್ಘಾಟನಾ ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದರು.

 
 
 
 
 
 
 
 
 
 
 

Leave a Reply