ರಾಜಸ್ಥಾನದ 50 ಕುಟುಂಬಗಳು ಮರಳಿ ಹಿಂದುಧರ್ಮದ ತೆಕ್ಕೆಗೆ.

ರಾಜಸ್ಥಾನ: ರಾಮ ಭಕ್ತರ ಹಲವಾರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಶ್ರೀರಾಮಚಂದ್ರ ಪ್ರಭುವಿಗೆ ಭವ್ಯ ಮಂದಿರದ ಯೋಗ ಒದಗಿ ಬಂದಿರುವಂತೆಯೇ, ರಾಜಸ್ಥಾನದ 50ಮುಸ್ಲಿಂ ಕುಟುಂಬಗಳ ಸುಮಾರು 250 ಮಂದಿ ಮರಳಿ ಹಿಂದುಧರ್ಮ ಸ್ವೀಕರಿಸಿದ ಘಟನೆ ನಡೆದಿದೆ.

ರಾಜಸ್ಥಾನದ ಬರ್ಮೇರ್ ನಗರ ವ್ಯಾಪ್ತಿಯ ಮೋತಿಸಾರಾ ಗ್ರಾಮದಲ್ಲೂ ಅಂದು ಬೆಳಗ್ಗಿಂದಲೇ ಹಬ್ಬದ ಕಳೆ. ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಹೋಮ ಹವನ ನಡೆದಿತ್ತು. ಮೂಲತ: ಹಿಂದುಗಳಾಗಿದ್ದು, ಈ ಹಿಂದೆ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡಂತಹ ಸುಮಾರು 50 ಕುಟುಂಬಗಳ 250 ಸದಸ್ಯರು ಇಸ್ಲಾಂ ತೊರೆದು ಮರಳಿ ಮಾತೃಧರ್ಮ ಸ್ವೀಕರಿಸಲು ಹೋಮ, ಹವನ ಆಯೋಜಿಸಿದ್ದರು.

ಬಳಿಕ ಈ ಕುಟುಂಬಗಳ ಎಲ್ಲಾ ಹಿರಿ ಕಿರಿ ಸದಸ್ಯರು ಪವಿತ್ರ ದಾರವನ್ನು ಧಾರಣೆ ಮಾಡಿಕೊಳ್ಳುವ ಮೂಲಕ ಹಿಂದು ಧರ್ಮ ಸ್ವೀಕರಿಸಿದರು.
ಈ 50ಕುಟುಂಬಗಳ ಹಿರಿಯರು ಹಿಂದು ಧರ್ಮದ ಕಂಚನ್ ಧಡಿ ಸಮುದಾಯಕ್ಕೆ ಸೇರಿದವರು. ಆದರೆ ಮೊಗಲರಸರು ಕೊಲ್ಲುವ ಬೆದರಿಕೆಯೊಡ್ಡಿ ಇವರನ್ನು ಇಸ್ಲಾಂಗೆ ಮತಾಂತರಿಸಿದ್ದರು. ಇತಿಹಾಸದ ಮೂಲಕ ತಮ್ಮ ನಿಜವಾದ ಧರ್ಮ ಮೂಲವರಿತ ಈ ಕುಟುಂಬಗಳು ಮರಳಿ ಹಿಂದು ಧರ್ಮವನ್ನು ಸೇರಲು ತೀರ್ಮಾನಿಸಿದ್ದರು.

ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯ ಮಂದಿರ ನಿರ್ಮಾಣದ ಪುಣ್ಯಕಾರ್ಯಕ್ಕೆ ಭೂಮಿ ಪೂಜೆ ನೆರವೇರುವ ಆ.5ರಂದೇ ಮಾತೃಧರ್ಮಕ್ಕೆ ಮರಳಲು ಈ ಕುಟುಂಬದ ಹಿರಿಯ ಸದಸ್ಯರು ನಿರ್ಧರಿಸಿದರು. ಅಂತೆಯೇ ಸಂತಸದಿಂದ ಮಾತೃಧರ್ಮಕ್ಕೆ ಮರಳಿಯೇ ಬಿಟ್ಟರು.

ನಾವು ಯಾವುದೇ ಬೆದರಿಕೆ, ಆಮಿಷಕ್ಕೊಳಗಾಗಿ ಹಿಂದು ಧರ್ಮಕ್ಕೆ ಮರಳಿಲ್ಲ, ಬದಲಾಗಿ ಸ್ವ ಇಚ್ಛೆಯಿಂದಲೇ ಮಾತೃಧರ್ಮಕ್ಕೆ ಮರಳಿದ್ದೇವೆಂದು ಕುಟುಂಬ ಸದಸ್ಯರು ಹೆಮ್ಮೆಯಿಂದ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply