ಕೋವಿಡ್ನಿಂದ ಅನಾಥರಾದ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ!

 ನವದೆಹಲಿ: ಕೋವಿಡ್-19 ಸೋಂಕು ಎಷ್ಟೋ ಕಡೆ ಒಂದೇ ಮನೆಯಲ್ಲಿ ಹಲವರನ್ನು ಬಲಿಪಡೆದಿದ್ದಲ್ಲದೆ, ಅದೆಷ್ಟೋ ತಂದೆ-ತಾಯಂದಿರು ಮಕ್ಕಳನ್ನು ಕಳೆದುಕೊಂಡು ದುಃಖತಪ್ತರಾಗಿದ್ದಾರೆ. ಮತ್ತೊಂದೆಡೆ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ಅಕ್ಷರಶಃ ಅನಾಥರಾಗಿದ್ದೂ ಇದೆ. ಅಂಥ ಮಕ್ಕಳಿಗೆ ಮುಂದೆ ದಿಕ್ಕುದೆಸೆ ಯಾರು, ಅವರ ಕೇರ್ ಟೇಕರ್ ಯಾರು ಎಂಬ ಪ್ರಶ್ನೆಗಳು  ಸವಾಲಾಗಿ  ಎದುರಾಗಿವೆ. ಅಂಥ ಮಕ್ಕಳ ಇದೀಗ ಪ್ರಧಾನಿ ಮೋದಿ ಆಶಾಕಿರಣ ವಾಗಿದ್ದಾರೆ. ಅಂದರೆ ಪಿಎಂ-ಕೇರ್ಸ್ ಈ ಮಕ್ಕಳ ಕಾಳಜಿ ವಹಿಸಲಿದೆ.

ಕೋವಿಡ್-19 ಸೋಂಕಿನಿಂದ ಅಪ್ಪ-ಅಮ್ಮ ಇಬ್ಬರನ್ನೂ ಅಥವಾ ಪಾಲಕರನ್ನು ಕಳೆದುಕೊಂಡು ಅನಾಥರಂತಾಗಿರುವ ಮಕ್ಕಳು ಚಿಂತಿತರಾಗಬೇಕಿಲ್ಲ ಎಂಬುದಾಗಿ ಪ್ರಧಾನಮಂತ್ರಿ ಮೋದಿ ಅಭಯ ನೀಡಿದ್ದಾರೆ. ಅಂಥ ಮಕ್ಕಳಿಗೆಂದೇ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರೆನ್’ ಯೋಜನೆ ರೂಪಿಸಲಾಗಿದೆ. ಇದರ ಮೂಲಕ ಅಂಥ ಮಕ್ಕಳಿಗೆ ಮಾಸಿಕ ಶಿಷ್ಯವೇತನ ಸಿಗಲಿದೆ ಹಾಗೂ ದೊಡ್ಡಮೊತ್ತದ ಧನಸಹಾಯವೂ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಶಿಷ್ಯವೇತನ ಮತ್ತು ಆರ್ಥಿಕ ಸಹಾಯ ತಕ್ಷಣವೇ ಸಿಗುವುದಿಲ್ಲ. ಕೋವಿಡ್ನಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳ ವಯಸ್ಸು 18 ವರ್ಷ ಆಗುತ್ತಿದ್ದಂತೆ ಅವರಿಗೆ ಮಾಸಿಕ ವೇತನ ಸಿಗಲಾರಂಭಿಸುತ್ತದೆ. ಅಲ್ಲದೆ ಆ ಮಕ್ಕಳಿಗೆ 23 ವರ್ಷವಾಗುತ್ತಿದ್ದಂತೆ 10 ಲಕ್ಷ ರೂಪಾಯಿ ಪಿಎಂ ಕೇರ್ಸ್ ಕಡೆಯಿಂದ ಸಿಗಲಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯ ತಿಳಿಸಿದೆ.

 
 
 
 
 
 
 
 
 

Leave a Reply