ರಾಮ ಮಂದಿರ ಭದ್ರತೆಗೆ ಉಡುಪಿ ನೆಲದ ಟೆಲಿಸ್ಕೋಪ್‌!

ಮಣಿಪಾಲದ ಎಂಐಟಿಯ ಉದ್ಯೋಗಿ ಪರ್ಕಳದ ನಿವಾಸಿ ಆರ್, ಮನೋಹರ್ ಅವರು ಆವಿಷ್ಕರಣೆ ಮಾಡಿ ನಿರ್ಮಿಸಿದ ದೂರದರ್ಶಕಕ್ಕೆ ಅಲ್ಲಿನ ಸರಕಾರ (ಸೆಕ್ಯೂರಿಟಿ ಪರ್ಪಸ್) ಭದ್ರತೆಯ ವಿಚಾರಕ್ಕೆ ಸಂಬಂಧಪಟ್ಟಂತೆ ನೇರವಾಗಿ ಕಾಣುವ ನೋಟ(ಪ್ರತಿಬಿಂಬ) ಇವರು ಸಿದ್ಧಪಡಿಸಿದ ದೂರದರ್ಶಕ ಆಯ್ಕೆಯಾಗಿದ್ದು, ಮತ್ತು ಮಾನ್ಯತೆ ಒಲಿದು ಬಂದಿರುವುದು ಸ್ವಾಗತಾರ್ಹ ವಿಷಯವಾಗಿದೆ. ಸುಮಾರು 50 ದೂರದರ್ಶಕಗಳನ್ನು ಆನ್ಲೈನ್ ಮೂಲಕ ಇವರು ಸಿದ್ಧಪಡಿಸಿ ಕಂಪೆನಿಗೆ ಖರೀದಿಸುವ ಆರ್ಡರ್ ಈಗಾಗಲೇ ಬಂದಿರುತ್ತದೆ. ಈಗಾಗಲೇ ಪ್ರಯೋಗಿಕವಾಗಿ ಇವರ ದೂರದರ್ಶಕಕ್ಕೆ ಮಾನ್ಯತೆ ದೊರೆತ್ತಿದ್ದು, ಆರ್ ಮನೋಹರ್ ಅವರು ಟೆಲಿಸ್ಕೋಪನ್ನ ಆವಿಷ್ಕಾರಣೆ ಮಾಡುವಲ್ಲಿ ಸಫಲತೆ ಕಂಡಿದ್ದು, ನೇರವಾಗಿ ಪ್ರತಿಬಿಂಬವನ್ನು ನೋಡುವಂತಹ ದೂರದರ್ಶಕವನ್ನು ಆವಿಷ್ಕರಣೆ ಮಾಡಿರುವುದರಿಂದ ಇವರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪೇಟೆಂಟ್ ಕೂಡ ದೂರದರ್ಶಕಕ್ಕೆ ಸಿಕ್ಕಿರುತ್ತದೆ. ದೂರ ದರ್ಶಕವನ್ನು ಇನ್ನಷ್ಟು ಸರಳ ರೀತಿಯಲ್ಲಿ ಮತ್ತು ಚಿಕ್ಕದಾದ ಗಾತ್ರಕ್ಕೆ ಮತ್ತು ಅತಿ ದೂರದ ವಸ್ತು ಕಾಣುವಂತೆ ಇನ್ನಷ್ಟು ಅಧ್ಯಯನದಲ್ಲಿ ತೊಡಗಿದ್ದಾರೆ. ಆರ್ ಮನೋಹರ್ ಒಟ್ಟಿನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಭದ್ರತೆಯ ದೃಷ್ಟಿಯಲ್ಲಿ ಸರ್ಚಿಂಗ್ ನಡೆಸಲು ಆರ್ ಮನೋಹರ್ ರವರ ದೂರದರ್ಶಕ ಆಯ್ಕೆ ಆಗಿರುವುದು ಸ್ಥಳೀಯರಲ್ಲಿಯೂ ಸಂತಸ ತಂದಿದೆ ಎಂದು ಸ್ಥಳೀಯರಾದ ಮೋಹನ್ ದಾಸ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳೇಬೆಟ್ಟು, ಜಯಶೆಟ್ಟಿ ಬನ್ನಂಜೆ, ರಾಜೇಶ್ ಪ್ರಭು ಪರ್ಕಳ, ಪ್ರಕಾಶ್ ನಾಯ್ಕ್ ಪರ್ಕಳ, ಜಯ ದೀಪ್ ನಾಯಕ್ ಇವರ ಸಾಧನೆಗೆ ಪ್ರತಿಫಲ ಸಿಕ್ಕಿದಂತಾಗಿದೆ ಇವರ ದೂರದರ್ಶಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭದ್ರತೆಕಾರ್ಯ ಉಪಯೋಗಿಸುತ್ತಿರುವ  ಕಾರ್ಯ ಶ್ಲಾಘನೀಯ ಎಂದು ಶುಭ ಹಾರೈಸಿದ್ದಾರೆ. ಸದ್ಯದಲ್ಲಿ 25 ದೂರದರ್ಶಕಗಳನ್ನ ರಚನೆ ಮಾಡಿ ನೀಡಲಿರುವೆನು ಎಂದು ಆರ್ ಮನೋಹರ್ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply