ಆತ್ಮನಿರ್ಭರ ರಕ್ಷಣಾ ವಲಯ~ ರಾಜನಾಥ್ ಸಿಂಗ್  ನಿರ್ಧಾರ

ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾದ ರಾಜನಾಥ್ ಸಿಂಗ್ ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿ​ದ್ದಾರೆ. ದೇಶೀಯ ನಿರ್ಮಿತ ಶಸ್ತ್ರಾ​ಸ್ರಗಳನ್ನು ತಯಾರಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ 2020-2024 ಅವಧಿಯಲ್ಲಿ 101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡುವ ವಿಚಾರಕ್ಕೆ ಕಡಿವಾಣ ಹಾಕಿದ್ದಾರೆ.

ಈ ಪಟ್ಟಿಯಲ್ಲಿ ರಕ್ಷಣಾ ವಲಯಕ್ಕೆ ಬೇಕಾಗಿರುವ ಶಸ್ತ್ರಾ​ಸ್ರ  ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿ ರಕ್ಷಣಾ ಸಾಮಗ್ರಿಗಳಾದ ಆರ್ಟಿಲ್ಲರಿ ಗನ್, ಅಸ್ಸಾಲ್ಟ್ ರೈಫಲ್, ಸೋನಾರ್, ರಾಡಾರ್, ಲಘು ವಿಮಾನಗಳು ಒಳಗೊಂಡಿವೆ. ಈ ಯೋಜನೆಗೆ ಸಂಬಂಧಿಸಿದಂತೆ ದೇಶೀಯ ಕಂಪ ನಿಗಳಿಗೆ 4 ಲಕ್ಷ ಕೋಟಿ ಒಪ್ಪಂದ ನಡೆಯಲಿದೆ. ಆತ್ಮನಿರ್ಭರ ಭಾರತ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಇದೊಂದು ಮಹತ್ವಪೂರ್ಣ ನಿರ್ಧಾರವಾಗಿದೆ​ ಎಂದು ಹೇಳಿದ್ದಾರೆ ​

 
 
 
 
 
 
 
 
 

Leave a Reply