ಮೂಡುಪೆರಂಪಳ್ಳಿ : 50 ನೇ ವರ್ಷದ ಯಕ್ಷಗಾನ ಸಭಾಕಾರ್ಯಕ್ರಮ

ಉಡುಪಿ : ನವಚೈತನ್ಯ ಯುವಕಮಂಡಲ ರಿ, ಮೂಡುಪೆರಂಪಳ್ಳಿ ಹಾಗೂ ಪೆರಂಪಳ್ಳಿ ಗ್ರಾಮಸ್ಥರ ಸಹಕಾರದಿಂದ ಕಳೆದ 49 ವರ್ಷಗಳಿಂದ ಒಂದೇ ಮೇಳ, ಒಂದೇ ಸ್ಥಳದಲ್ಲಿ,ಜನವರಿ 1 ರಂದು ನಿರಂತರವಾಗಿ ನಡೆಯುತ್ತಿದ್ದ ಯಕ್ಷಗಾನ ಈ ಸಲ 50 ನೇ ವರ್ಷದ ಯಕ್ಷಗಾನ ಸಭಾಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಹಗಲಿಡಿ ಶ್ರಮಪಟ್ಟು ಡುಡಿಯುವ ಮಂದಿಗೆ ,ದೈಹಿಕ ವಿಶ್ರಾಂತಿಯ ಜೊತೆಗೆ ಮಾನಸಿಕ ವಿಶ್ರಾಂತಿ ಹಾಗೂ ನೆಮ್ಮದಿ ನೀಡಬೇಕೆಂದು ಶ್ರೀ ಮಧ್ವಾಚಾರ್ಯರು ಹಾಗೂ ಅದಮಾರು ಮಠದ ಮೂಲ ಗುರುಗಳಾದ ಶ್ರೀ ನರಹರಿತೀರ್ಥರು ರಾಮಾಯಣ, ಮಹಾಭಾರತ, ಭಾಗವತ ಇತ್ಯಾದಿ ಕಥೆಗಳು ಜನರಿಗೆ ಸುಲಭವಾಗಿ ಅರ್ಥವಾಗಬೇಕೆಂಬ ಉದ್ದೇಶದಿಂದ ಹಾಡು,ಕುಣಿತ, ಸಂಭಾಷಣೆ, ಅಭಿನಯ ವೇಷಭೂಷಣ ಇರುವಂತಹ ವಿಶಿಷ್ಟ ಕಲೆ “ಯಕ್ಷಗಾನ” ವನ್ನು ಆರಂಭಿಸಿದರು.

ಅಂತಹ ಯಕ್ಷಗಾನ ಈ ಪೆರಂಪಳ್ಳಿಯ ಅಂಬಡೆಬೆಟ್ಟುವಿನಲ್ಲಿ ಜಾತಿ ಧರ್ಮ ಭೇದ ಇಲ್ಲದೆ ಕಳೆದ 50 ವರ್ಷಗಳಲ್ಲಿ ನಿರಂತರ ನಡೆಯುತ್ತಿರುವ ವಿಚಾರ ಕೇಳಿದಾಗ ಎದೆ ತುಂಬಿಬರುತ್ತೆ.ಇದು ಹೀಗೆ ಮುಂದುವರಿಯಲಿ ಎಂದು ಆಶೀರ್ವದಿಸಿದರು.

ಮುಖ್ಯ ಅತಿಥಿಗಳಾಗಿ ರೆ ! ಪಾ! ಅನಿಲ್ ಡಿಸೋಜ ಧರ್ಮಗುರುಗಳು ಫಾತಿಮಾ ಮಾತೆ ಚರ್ಚ್ ಪೆರಂಪಳ್ಳಿ, ಶ್ರೀ ಡಾ” ತಲ್ಲೂರು ಶಿವರಾಮ ಶೆಟ್ಟಿ ತಲ್ಲೂರ್ಸ ಫ್ಯಾಮಿಲಿ ಟ್ರಸ್ಟ್ ರಿ, ಪ್ರದೀಪ್ ಅದ್ಯಕ್ಷರು ನವಚೈತನ್ಯ ಯುವಕ ಮಂಡಲ, ವೇದವ್ಯಾಸ ಐತಾಳ್ ಸಗ್ರಿ ಪುರೋಹಿತರು, ಕಿಟ್ಟ ಪೂಜಾರಿ, ಮರಿಯನ್ ಡಿಸೋಜ ಅಂಬಡೆಬೆಟ್ಟು, ಅರಣಾ ಸುದಾಮ ನಾಮನಿರ್ದೇಶಿತ ನಗರಸಭಾ ಸದಸ್ಯರು ಶ್ರೀ ಶಂಕರ್ ಕುಲಾಲ್ ಕಾರ್ಯಾದ್ಯಕ್ಯರು ಯಕ್ಷಗಾನ ಸಮಿತಿ ಪೆರಂಪಳ್ಳಿ ಇವರ ಉಪಸ್ಥಿತಿಯಲ್ಲಿ ಯಕ್ಷಗಾನವನ್ನು ಆರಂಬಿಸಿದ ಹಿರಿಯರನ್ನು ಸ್ವಾಮೀಜಿಯವರು ಗೌರವಿಸಿದರು. ಸಚ್ಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು,ರವೀಂದ್ರ ಪೂಜಾರಿ ವಂದಿಸಿದರು.

 
 
 
 
 
 
 
 
 
 
 

Leave a Reply