ಲಾಕ್ ಡೌನ್ ವದಂತಿ ಹಬ್ಬಿಸಿದ್ರೆ ಕಠಿಣ ಕ್ರಮ~ ಡಾ.ಸುಧಾಕರ್ ವಾರ್ನಿಂಗ್

ಬೆಂಗಳೂರು- ಓಮಿಕ್ರಾನ್ ಹಿನ್ನೆಲೆ ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ ಎಂದು ವದಂತಿ ಹಬ್ಬಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಾಗಲೇ ಓಮಿಕ್ರಾನ್ ಎಂಬ ಹೊಸ ವೈರಸ್ 12 ದೇಶಗಳಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆ ಅಂತರಾಷ್ಟ್ರೀಯ ಪ್ರಯಾಣಿಕರು ಬರುತ್ತಿದ್ದು, ಅವರನ್ನೆಲ್ಲರನ್ನು ಕಡ್ಡಾಯವಾಗಿ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 

ಈಗ 12 ದಿನದಿಂದ ಬಂದವರ ಬಗ್ಗೆ ನಿಗಾ ಇಡಲಾಗಿದ್ದು, ಅವರ ಫೋನ್ ನಂಬರ್ ಟ್ರೇಸ್ ಮಾಡಲಾಗುತ್ತಿದೆ ಎಂದು ಡಾ.ಸುಧಾಕರ್ ತಿಳಿಸಿದರು. ಡೆಲ್ಟಾ ಅಷ್ಟು ಓಮಿಕ್ರಾನ್ ಭೀಕರತೆ ಇರುವುದಿಲ್ಲ. ಆದರೆ ವಾಂತಿ, ಪಲ್ಸ್ ರೇಟ್ ಜಾಸ್ತಿಯಾಗುವ, ತಲೆ ಸುತ್ತು, ಆಯಾಸದ ಲಕ್ಷಣಗಳು ಓಮಿಕ್ರಾನ್ ಗುಣಲಕ್ಷಣಗಳಾಗಿವೆ. 

ಹೊಸ ತಳಿಯಲ್ಲಿ ಐಸಿಯು ಕೇಸ್ ಗಳು ಕಡಿಮೆಯಾಗಿರುತ್ತದೆ ಎಂದು ಆಫ್ರೀಕಾದಲ್ಲಿರುವ ನನ್ನ ವೈದ್ಯ ಸ್ನೇಹಿತ ತಿಳಿಸಿದ್ದಾರೆ. ಆದರೂ ಐಸಿಎಂಆರ್ ವರದಿ ಬರುವ ತನಕ ನಾವು ಯಾವುದನ್ನು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು ಓಮಿಕ್ರಾನ್ ಭೀತಿ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ ಎಂಬುವುದು ಶುದ್ಧ ಸುಳ್ಳಾಗಿದ್ದು, ಜನರು ಇಂತಹ ವದಂತಿಗಳನ್ನು ನಂಬಬಾರದು ಎಂದು ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply