ಕೋಟ: ಪ್ರಾಥಮಿಕ ಶಾಲಾ ಮಕ್ಕಳಿಗೆ ಪರಿಸರ ಮಾಹಿತಿ ಕಾರ್ಯಾಗಾರ ಮಾಲಿಕೆ

ಕೋಟ: ಭೂಮಿ ತಾಯಿಯನ್ನು ಆರಾಧಿಸಿದರೆ ಪರಿಸರ ಜಾಗೃತಿ ತನ್ನಿಂತಾನೆ ವೃದ್ಧಿಯಾಗುತ್ತದೆ ಎಂದು ಕೋಟದ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ ನಾವಡ ಹೇಳಿದ್ದಾರೆ. ಶಾಂಭವೀ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಕೋಟ ಇಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ,ಗೆಳೆಯರ ಬಳಗ ಕಾರ್ಕಡ,ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ , ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ಸ್ಥಳೀಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪರಿಸರ ಮಾಹಿತಿ ಕಾರ್ಯಾಗಾರ ಮಾಲಿಕೆ ೨ನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿ ಪ್ರಾಥಮಿಕ ಹಂತದಲ್ಲೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಏಕೆಂದರೆ ಪ್ರತಿ ಮನೆಯಲ್ಲಿ ಮಕ್ಕಳು ಅದನ್ನು ಅನುಸರಿಸಿದರೆ ಹಿರಿಯರಿಗೂ ಅದರ ಬಗ್ಗೆ ಅರಿವು ಮೂಡುತ್ತದೆ ಆಗ ಮಾತ್ರ ಯಶಸ್ಸು ಲಭಿಸಿದಂತೆ,ಪ್ರತಿಯೊoದು ಮನೆಯಲ್ಲೂ ಒಂದೊAದು ಗಿಡಗಳನ್ನು ನೆಟ್ಟು ಪೋಷಿಸಿದರೆ ಮುಂದಿನ ತಲೆಮಾರಿಗೆ ಬಹುದೊಡ್ಡ ಕೊಡುಗೆ ನೀಡಿದಂತೆ ಈ ನಿಟ್ಟಿನಲ್ಲಿ ಪಂಚವರ್ಣ ಹಾಗೂ ಇನ್ನಿತರ ಸಂಘಸAಸ್ಥೆಗಳ ಪರಿಸರ ಕಾಳಜಿ ಹಾಗೂ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪತ್ರಕರ್ತ ,ಸಮಾಜಸೇವಕ ಅರುಣ್ ಕುಮಾರ್ ಶಿರೂರು ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರ ಪ್ರಜ್ಞೆ ಅತ್ಯಗತ್ಯ ಈ ದಿಸೆಯಲ್ಲಿ ಮುಂದಿನ ತಲೆಮಾರಿನ ದೃಷ್ಠಿಕೋನ ಇರಿಸಿಕೊಂಡು ಮಕ್ಕಳಿಗೆ ಮಾಹಿತಿ ನೀಡುವ ಉದ್ದೇಶ ಅರ್ಥಪೂರ್ಣ ಎಂದರಲ್ಲದೆ ಮಕ್ಕಳ ಇತ್ತೀಚಿಗಿನ ಆಹಾರ ಕ್ರಮವನ್ನು ಮುಂದಿಟ್ಟುಕೊoಡು ಮಾತನಾಡಿ ಇಂದಿನ ನವನವೀನ ತಿನಿಸುಗಳಿಗೆ ಮಾರುಹೋಗಿ ಅನಾರೋಗ್ಯಕ್ಕಿಡಾಗುವುದು,ಅದನ್ನು ತಿಂದ ಬಳಿ ಅದರ ಪ್ಲಾಸ್ಟಿಕ್ ಎಸೆಯುವ ಮನಸ್ಥಿತಿಯ ಬಗ್ಗೆ ತಿಳಿಹೇಳಿದರಲ್ಲದೆ,ಜಾಗೃತಿ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಸವಿವಿರವಾಗಿ ಮಾಹಿತಿ ನೀಡಿ ಪರಿಸರದ ಬಗ್ಗೆ ಗಾಡವಾಗಿ ಮಕ್ಕಳಿಗೆ ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂಭವೀ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದಿವಾಕರ್ ರಾವ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಪoಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಪಂಚವರ್ಣದ ಕಾರ್ಯದರ್ಶಿ ನಿತೀನ್ ಕುಮಾರ್ ಸ್ವಾಗತಿಸಿದರೆ ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply