ನಾಳೆ ಬ್ರಹ್ಮಾವರದ ಸಾಹಿತ್ಯ ಸಮ್ಮೇಳನ ನೋಡ ಬನ್ನಿ

ಬ್ರಹ್ಮಾವರ ತಾಲ್ಲೂಕು 3ನೇ ಸಾಹಿತ್ಯ ಸಮ್ಮೇಳ ನವು ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲ್ಲೂಕು ಘಟಕದ ಆಸರೆಯಲ್ಲಿ ‘ಒರೆಗಲ್ಲು ‘ ಸಂಶೋಧನೆಯ ಅನುರಣನ ಶೀರ್ಷಿಕೆಯಲ್ಲಿ ಸಮೃದ್ಧಿ ಮಹಿಳಾ ಮಂಡಳಿ (ರಿ.), ಚೇರ್ಕಾಡಿ ಇವರ ಸಹಕಾರದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೇರ್ಕಾಡಿ-ಪೇತ್ರಿಯಲ್ಲಿ
ನಡೆಯಲಿದೆ.

ಚಂದ್ರಶೇಖರ ಕೆದಿಲಾಯ ವೇದಿಕೆಯಲ್ಲಿ ಸಂಶೋಧಕರಾದ ಡಾ| ಜಗದೀಶ ಶೆಟ್ಟಿ ಸಮ್ಮೇಳನಾಧ್ಯಕ್ಷತೆಯಲ್ಲಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿದೆ.

ಪೂರ್ವಾಹ್ನ 8.30ಕ್ಕೆ ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಖಾ ಎಸ್. ಭಟ್, ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ.

ಕಸಾಪ, ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ ಪರಿಷತ್ ಧ್ವಜಾರೋಹಣ ಮಾಡಲಿದ್ದಾರೆ. ಪೂರ್ವಾಹ್ನ ೯.೦೦ ಕ್ಕೆ ಪೇತ್ರಿ ಕೀರ್ತಿ ವೃತ್ತದಿಂದ ಸಮ್ಮೇಳನಾಧ್ಯಕ್ಷರನ್ನು ಎದುರುಗೊಂಡು ಗೌರವ ಪೂರ್ವಕವಾಗಿ ಸ್ವಾಗತಿಸಿ ನಂತರ ಕನ್ನಡಮಾತೆ ಶ್ರೀ ಭುವನೇಶ್ವರಿ ದೇವಿಯ ಶೋಭಾಯಾತ್ರೆ ನಡೆ ಯಲಿದೆ. ಪೇತ್ರಿಯ ಉದ್ಯಮಿ ಮಂಜುನಾಥ ಹೆಬ್ಬಾರ,ಮೆರವಣಿಗೆ ಚಾಲನೆ ನೀಡಲಿದ್ದಾರೆ.

ಪೂರ್ವಾಹ್ನ 10.00 ಕ್ಕೆ ಶಾಸಕ ರಘುಪತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,ಬ್ರಹ್ಮಾವರ ತಹಶೀಲ್ದಾರರಾದ ರಾಜಶೇಖರ ಮೂರ್ತಿ ‘ಸಮೃದ್ಧಿ ಕವನ ಗುಚ್ಛ’ ಬಿಡುಗಡೆಗೊಳಿಸಲಿದ್ದಾರೆ.

ಗೋಷ್ಠಿಗಳು⭕️
ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಸುಜಯಿಂದ್ರ ಹಂದೆ ಇವರ ಸಮನ್ವಯದಲ್ಲಿ ಸಂಶೋಧಕ ಗುರುಮೂರ್ತಿ ಇವರಿಂದ ಬ್ರಹ್ಮಾವರ ಶಾಸನ ಗಳು, ಮಹೇಶ್ ಆರ್ ನಾಯಕ್ ಇವರಿಂದ ನನ್ನಜ್ಜನ ಬಿರುಗಾಳಿಯ ಹಾರಾಟ ಉಪನ್ಯಾಸ ನಡೆಯಲಿದೆ.

ಮನೋಹರ್ ಭಟ್,ಸತೀಶ್ ವಡ್ಡರ್ಸೆ, ಶ್ರೀಮತಿ ಜ್ಯೋತಿ ಸಾಲಿಗ್ರಾಮ ಇವರಿಂದ ಕೋಟ ಕನ್ನಡ ಮಾತುಕತೆ -ಹರಟೆ ನಡೆಯಲಿದೆ.

ಐರೋಡಿ ರಾಜಶೇಖರ್ ಹೆಬ್ಬಾರ್, ಕೃಷ್ಣ ಮೂರ್ತಿ ಉರಾಳ ಮತ್ತು ವೆಂಕಟೇಶ್ ಕ್ರಮಧಾರಿ ಇವರಿಂದ ಯಕ್ಷಗಾನ ಸ್ಥಿತ್ಯಂತರ ನಡೆಯಲಿದೆ.

ನರೇಂದ್ರ ಕುಮಾರ್ ಕೋಟ ರವರ ಸಮನ್ವಯ ದಲ್ಲಿ ವಿವಿಧ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ.

ಮೋಹನ್ ಉಡುಪ, ರಮಾನಂದ ರಾವ್, ಜಯ ರಾಮ್ ಶೆಟ್ಟಿಗಾರ್, ಶೇಷಗಿರಿ ಭಟ್ ಸಾರಥ್ಯದಲ್ಲಿ
ಸಮ್ಮೇಳನ ಅಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು ಮಾತುಕತೆ ನಡೆಯಲಿದೆ.

ಸಮಾರೋಪ ಸಮಾರಂಭ ದಲ್ಲಿ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕಾರ್ಯಕ್ರಮದ ಮಧ್ಯೆ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮ ನೃತ್ಯ ಸಿಂಚನ ನಡೆಯಲಿದೆ.

ಸಮ್ಮೇಳನಾಧಕ್ಷರ ಪರಿಚಯ -ಬ್ರಹ್ಮಾವರ ತಾಲೂಕು 3ನೇ ಕನ್ನಡ ಸಾಹಿತ್ಯಸಮ್ಮೇಳನವು ಇತಿಹಾಸ ಸಂಶೋಧಕ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಜಗದೀಶ್ ಶೆಟ್ಟಿಯವರ ಸಮ್ಮೇಳನಾಧಕ್ಷತೆಯಲ್ಲಿ ನಡೆಯಲಿದೆ.

ಬ್ರಹ್ಮಾವರ ಸಮೀಪದ ಹಂದಾಡಿಯವರಾದ ಡಾ.ಬಿ.ಜಗದೀಶ್ ಶೆಟ್ಟಿ ಪ್ರಸ್ತುತ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ.

 
 
 
 
 
 
 
 
 
 
 

Leave a Reply