ವಸಂತ ವೇದ ಶಿಬಿರದಿಂದ ಜೀವನ ಮೌಲ್ಯ ವೃದ್ಧಿ ~ಡಾ.ಕಾರಂತ

ಸಹಿಷ್ಣುತೆ, ಸಮಾನತೆ, ಸಾಮರಸ್ಯ, ಸಹಬಾಳ್ವೆ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಉಪನೀತ ವಟುಗಳಿಗೆ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಶಿಬಿರವು ಪೂರಕವಾಗಿದ್ದು, ಶಿಬಿರಾರ್ಥಿಗಳಿಗೆ ಶ್ರೇಯಸ್ಸಾಗಲೆಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸುತ್ತ ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ದೇವಳದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ,ಕೋಶಾಧಿಕಾರಿ ಪರಶುರಾಮ ಭಟ್ಟ, ಕೂಟ ಮಹಾ ಜಗತ್ತಿನ ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಕಾರ್ಯದರ್ಶಿ ಮಹಾಬಲ ಹೇರ್ಳೆ,ಮಂಜುನಾಥ ಉಪಾಧ್ಯ, ಗೆಳೆಯರ ಬಳಗದ ಅಧ್ಯಕ್ಷ ಹಾಗೂ ಕೂ ಮ ಜಗತ್ತಿನ ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಶ್ರೀ ಕೆ.ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ವೃಂದದ ಚಿದಾನಂದ ತುಂಗ ಮತ್ತು ಸುಮಾರು ನಾನೂರು ಮಂದಿ ಶಿಬಿರಾರ್ಥಿಗಳು ಮತ್ತು ಪೋಷಕ ವೃಂದದವರು ಉಪಸ್ಥಿತರಿದ್ದರು. ದೇವಳದ ಆಗಮನಿಗಮಾಗಮ ವೇದ ಪಾಠ ಶಾಲೆಯ ವಿದ್ಯಾರ್ಥಿಗಳು, ಪ್ರಬಂಧಕ ನಾಗರಾಜ ಹಂದೆ ಮತ್ತು ಸಿಬ್ಬಂದಿ ವರ್ಗದವರ ನೇತೃತ್ವದಲ್ಲಿ ಮೂರು ವಾರಗಳ ತನಕ ಶಿಬಿರವು ನಡೆಯಲಿದ್ದು, ಮೇ 9 ರಂದು ಸಮಾರೋಪ ಸಮಾರಂಭವು ಜರುಗಲಿದೆಯೆಂದು ಉಪ ಪ್ರಬಂಧಕ ಪಾಂಡೇಶ್ವರ ಗಣೇಶ ಭಟ್ಟರು ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply