ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.  ಯುವ ಉತ್ಸಾಹಿ ರಾಜ್ಯಶಾಸ್ರ  ಉಪನ್ಯಾಸಕಶ್ರೀ ದಯಾನಂದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅವರು ಮಾತನಾಡುತ್ತಾ ಸ್ವಾಮಿ ವಿವೇಕಾನಂದರ ತತ್ವಗಳು, ವಿವೇಕಾನಂದ ಆದರ್ಶಗಳು, ಜೀವನ ಚರಿತ್ರೆ, ನುಡಿ ಮುತ್ತುಗಳು ಮತ್ತು ಅವರ ಕೊಡುಗೆಗಳ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆ ಉಪನ್ಯಾಸ ನೀಡಿದರು.
ಅವರು ಸ್ವಾಮಿ ವಿವೇಕಾನಂದರ ಬಗ್ಗೆ ಮಾತನಾಡುತ್ತಾ  “ಆತ್ಮ ವಿಶ್ವಾಸಕ್ಕಿಂತ ದೊಡ್ಡ ಗೆಳೆಯರು ಯಾರೂ ಇಲ್ಲ, ಯುವಕರು ಹೇಡಿಗಳಾಗಬಾರದು, ಪರಾವಲಂಭಿಗಳಾಗ ಬಾರದು, ನಿಮ್ಮ ಬದುಕಿಗೆ ನೀವೇ ಶಿಲ್ಪಿಗಳು, ಧೀರರಾಗಿ ನೀತಿವಂತರಾಗಿ ಸಹಾನುಭೂತಿವುಳ್ಳವರಾಗಿ ಬಾಳಿ ಜೀವನದಲ್ಲಿ ಸಾಧನೆ ಮಾಡಬೇಕು” ಎಂದು ವಿದ್ಯಾರ್ಥಿಗಳಿಗೆ ವಿವೇಕಾನಂದರ  ಆದರ್ಶಗಳನ್ನು ಮನದಟ್ಟು ಮಾಡಿಕೊಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ವಹಿಸಿದ್ದು, ವಿವೇಕಾನಂದರ ಜನ್ಮ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ಉನ್ನತ ಆಲೋಚನೆಗಳಿಂದ ಅತ್ಯುನ್ನತ ಆದರ್ಶಗಳನ್ನು ನಿಮ್ಮ ಜೀವನದಲ್ಲಿ ಅಳ ವಡಿಸಿ ಕೊಂಡು ಸಾಧನೆ ಮಾಡಿ ಎಂದರು.  ಸ್ವಾಮಿ ವಿವೇಕಾನಂದರ ನುಡಿ ಗಳಾದ “ಹೆಣ್ಣಿಗೆ ಶಿಕ್ಷಣ ಅಗತ್ಯವಿಲ್ಲ ಎನ್ನುವುದನ್ನು ನಾನು ಖಂಡಿಸುತ್ತೇನೆ, ಆತ್ಮ ವಿಶ್ವಾಸಕ್ಕಿಂತ ದೊಡ್ಡ ಗೆಳೆಯರು ಯಾರೂ ಇಲ್ಲ.  ದಾನ ಮಾಡಿರಿ ಅದರಿಂದ ಪ್ರತಿಫಲ ನಿರೀಕ್ಷಿಸಬೇಡಿ ಅದು ತಾನಾಗಿಯೇ ವಾಪಾಸ್ಸು ಬರಲಿದೆ.  ಎಂದು ನಿನ್ನ ಹೃದಯ ಒಡೆಯುವುದೇ ಅಂದಿನಿಂದ  ನಿನ್ನ ಬುದ್ಧಿ ಕೆಲಸ ಮಾಡಲು ಆರಂಭಿಸುತ್ತದೆ” ಎನ್ನುವ ಸ್ವಾಮಿ ವಿವೇಕಾ ನಂದರ ಮಾತುಗಳನ್ನು ಹೇಳುತ್ತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಉದಯ ಶೆಟ್ಟಿ ಕೆ. ಯುವರೆಡ್ ಕ್ರಾಸ್ ಘಟಕದ ಸಂಚಾಲಕರು ಸ್ವಾಗತಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸುರೇಶ್ ರೈ ಕೆ., ಡಾ. ರಾಮಚಂದ್ರ ಪಾಟ್ಕರ್ ರೂರ‍್ಸ್-ರೇಂರ‍್ಸ್ ಘಟಕ ಸಂಚಾಲಕರು,  ಮಮತಾ ಎನ್.ಎಸ್.ಎಸ್. ಯೋಜನಾಧಿಕಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ರಾಘವ ನಾಯ್ಕ ಸಂಚಾಲಕರು, ಯುವ ಸಬಲೀಕರಣ ಘಟಕ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.ಉಮೇಶ್ ಪೈ ವಂದಿಸಿದರು.  
 
 
 
 
 
 
 
 
 
 
 

Leave a Reply