ಗರೋಡಿಗಳ ಅಧ್ಯಯನ ಮತ್ತು ಸಂಶೋಧನಾತ್ಮಕ ಗ್ರಂಥ ರಚನೆಗಾಗಿ ಕ್ಷೇತ್ರ ಕಾರ್ಯಕ್ಕೆ ಚಾಲನೆ

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) “ಬೈದ ಶ್ರೀ” ಆದಿ ಉಡುಪಿ, ಉಡುಪಿ ಇದರ ವತಿಯಿಂದ 250ಕ್ಕಿಂತ ಹೆಚ್ಚು ಆರಾಧನೆಗೊಳ್ಳುತ್ತಿರುವ ಗರೋಡಿಗಳ ಅಧ್ಯಯನ ಮತ್ತು ಸಂಶೋಧನಾತ್ಮಕ ಗ್ರಂಥ ರಚನೆಗಾಗಿ ಕ್ಷೇತ್ರ ಕಾರ್ಯಕ್ಕೆ ಇಂದು ಬೈದ ಶ್ರೀ ಆದಿ ಉಡುಪಿ ಇಲ್ಲಿ ಚಾಲನೆ ನೀಡಲಾಯಿತು.
ಶಾಸಕ ರಘುಪತಿ ಭಟ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಬಳಿಕ  ಮಾತನಾಡಿ ಕೋಟಿ-ಚೆನ್ನಯರು ಎಲ್ಲ ವರ್ಗದವರು ಆರಾಧಿಸುವ ಕಾರಣಿಕ ಪುರುಷರು.  ಬೈದ್ಯಶ್ರೀ ಸಂಸ್ಥೆಯವರು ನಿರಂತರವಾಗಿ ಅಧ್ಯಯನ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರ. ನನ್ನ ಸಂಪೂರ್ಣ ಸಹಕಾರವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಭರವಸೆ ನೀಡಿದರು.
ಅತಿಥಿಯಾಗಿ ಆಗಮಿಸಿದ ಗೋಪಾಲ್ ಸಿ ಬಂಗೇರರವರು ಮಾತನಾಡಿ ಬೈದೆತಿ ಸಂಸ್ಥೆಯ ಕೆಲಸಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ನನ್ನ ವೈಯಕ್ತಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.  ಸಂಸ್ಥೆಯ ಅಧ್ಯಕ್ಷ ದಾಮೋದರ ಕಲ್ಮಾಡಿ ಸ್ವಾಗತಿಸಿದರು.  ಉಪಾಧ್ಯಕ್ಷ ಶೇಖರ್ ಕಲ್ಮಾಡಿಯವರು  ಹಾಗೂ ವಿಶ್ವಸ್ಥರಾದ ಚೆಲುವ ರಾಜ್ ಪೆರಂಪಳ್ಳಿ, ಸಂಜೀವ ಪೂಜಾರಿ,  ಜಯಕರ್ ವಿ ಸುವರ್ಣ,  ಗಂಗಾಧರ ಕಿದಿಯೂರು,  ಶೇಖರ್ ಪೂಜಾರಿ,  ಮಹೇಶ್ ಏನ್,  ಹರೀಶ್ ಎಂ. ಕೆ,  ಸೂರ್ಯೋದಯ ಪೆರಂಪಳ್ಳಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ನಿರೂಪಿಸಿ ದನಿವಾದವಿತ್ತರು.
 
 
 
 
 
 
 
 
 
 
 

Leave a Reply