ಡಿಜಿಪೇ ಸಖಿಯವರಿಗೆ ಒಂದು ದಿನದ ಕಾರ್ಯಾಗಾರ

ಉಡುಪಿ, ಜೂನ್ 24 (ಕವಾ): ಡಿಜಿಪೇ ಸಖಿಯವರ ಒಂದು ದಿನದ ಕಾರ್ಯಾಗಾರವು ಇತ್ತೀಚೆಗೆ ನಗರದ ಜಿಲ್ಲಾ ಪಂಚಾಯತ್‌ನ ಮಾನವ ಸಂಪನ್ಮೂಲ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಾಗಾರದಲ್ಲಿ 30 ಕ್ಕೂ ಅಧಿಕ ಸಂಖ್ಯೆಯಲ್ಲಿ ಡಿಜಿಪೇ ಸಖಿಯವರು ಭಾಗವಹಿಸಿ, ಡಿಜಿಪೇ ಮೂಲಕ ಹಣಕಾಸಿನ ವಹಿವಾಟು ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ಟೆಲಿ-ಲಾ, ಜೀವ ವಿಮೆ, ಮೋಟಾರ್ ವಿಮೆ, ಬಸ್ ಟಿಕೆಟ್, ವಿಮಾನ
ಟಿಕೆಟ್, ಹೋಟೆಲ್ ರೂಂ ಬುಕ್ಕಿಂಗ್, ಸಿ.ಎಸ್.ಸಿ ಗ್ರಾಮೀಣ ಮ್ಯಾಟ್ರಿಮೋನಿ, ಶಿಕ್ಷಣ ಇಲಾಖೆ ಸೇವೆಗಳು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಏಪ್ರಿಲ್, ಮೇ ತಿಂಗಳಲ್ಲಿ ಅತಿ ಹೆಚ್ಚು ವಹಿವಾಟು ಮಾಡಿದ ಡಿಜಿಪೇ ಸಖಿಯವರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ ಎಚ್ ಮೆಚ್ಚುಗೆ ವ್ಯಕ್ತಪಡಿಸಿ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಹಿವಾಟು ನಡೆಸುವಂತೆ
ತಿಳಿಸಿದರು.

ಯೋಜನೆಗಳ ಕುರಿತು ಸಿ.ಎಸ್.ಸಿ ರಾಜ್ಯ ಮಟ್ಟದ ವ್ಯವಸ್ಥಾಪಕ ಶಿವಶೇಖರಗೌಡ ಪಾಟೀಲ್, ಹಾಗೂ ಜಿಲ್ಲಾ ವ್ಯವಸ್ಥಾಪಕ ನಿತೀಶ್ ಶೆಟ್ಟಿಗಾರ್ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎಮ್, ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್, ಏಕ ವ್ಯಕ್ತಿ ಸಮಾಲೋಚಕ ಪಾಂಡುರoಗ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply