60 ನಿಮಿಷಗಳ ಅಂತರದಲ್ಲಿ ಸಾವನ್ನಪ್ಪಿದ ಅವಳಿ ಸಹೋದರರು!

 ರಾಜಸ್ತಾನ ಮೂಲದ ಅವಳಿ ಸಹೋದರರಿಬ್ಬರು 60 ನಿಮಿಷಗಳ ಅಂತರದಲ್ಲಿ ಸಾವನ್ನಪ್ಪಿದ ಕೌತುಕದ ಘಟನೆ ಬರ್ಮರ್‌ ಜಿಲ್ಲೆಯ ಸಿಂಧಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸುಮೇರ್‌ ಸಿಂಗ್‌ ಮತ್ತು ಸೋಹನ್‌ ಸಿಂಗ್‌ ಅವಳಿ ಸಹೋದರರು. ಸುಮೇರ್‌ ಪುಣೆಯಲ್ಲಿ ಉದ್ಯೋಗದಲ್ಲಿದ್ದರೆ ಸೋಹನ್‌ ರಾಜಸ್ಥಾನದಲ್ಲೇ ಉಳಿದು ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದರು.ಪುಣೆಯಲ್ಲಿದ್ದ ಸುಮೇರ್‌ ಟೇರೆಸ್‌ ನ ಮೇಲೆ ಫೋನಿನಲ್ಲಿ ಮಾತನಾಡುತ್ತಾ ಅಂಚಿಗೆ ಬಂದು ಕಾಲು ಜಾರಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಸಹೋದರನ ಸಾವಿನ ಸುದ್ದಿ ತಲುಪಿದ ಒಂದು ಘಂಟೆಯ ಒಳಗಾಗಿ ಮನೆಯಿಂದ 100 ಮೀ. ದೂರದಲ್ಲಿರುವ ಟ್ಯಾಂಕ್‌ನಿಂದ ನೀರು ತರಲು ಹೋದ ಸೋಹನ್‌ ಕಾಲು ಜಾರಿ ನೀರಿನ ಟ್ಯಾಂಕಿಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ.ಬಾಲ್ಯದಿಂದಲೂ ಒಂದಾಗಿ ಅನ್ಯೋನ್ಯತೆಯಿಂದಿದ್ದ ಸಹೋದರರು ಸಾವಿನಲ್ಲೂ ಒಂದಾಗಿದ್ದಾರೆ.ಅವರ ತವರೂರಿನಲ್ಲಿ ಒಂದೇ ಚಿತೆಯಲ್ಲಿ ಸಹೋದರರಿಬ್ಬರ ಅಂತ್ಯ ಕ್ರಿಯೆ ನೆರವೇರಿಸಲಾಯಿತು.

 
 
 
 
 
 
 
 
 
 
 

Leave a Reply