ಖಾಸಗಿ ಕಾರಿನಲ್ಲಿ ಬಂದ ರಾಜೇಶ್ವರಿ ಶೆಟ್ಟಿ, ವಾಪಸು ಹೋಗುವಾಗ ಪೊಲೀಸ್ ಜೀಪ್ ಹತ್ತಿದ್ರು 

ಭಾಸ್ಕರ್ ಶೆಟ್ಟಿ ಪ್ರಕರಣದಲ್ಲಿ ಪುರಾವೆಗಳೇ ಇಲ್ಲ; ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್’ಗೆ ಹೋಗುತ್ತೇವೆ – ವಕೀಲ ಪ್ರದೀಪ್ ಕುಲಕರ್ಣಿ

 
ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಹೊರ ಬಿದ್ದಿದ್ದು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ  ಬಗ್ಗೆ ಆರೋಪಿಗಳ ಪರ ವಕೀಲ ಪ್ರದೀಪ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದಲ್ಲಿ ಪುರಾವೇಗಳೆ ಇಲ್ಲ, ಈ ತೀರ್ಪು ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಹೋಗುತ್ತೇವೆಂದು ಮಾಹಿತಿ ನೀಡಿದ್ದಾರೆ.ಪ್ರಕರಣದಲ್ಲಿ ಸರಿಯಾದ ಸಾಕ್ಷ್ಯಧಾರವಿಲ್ಲ, ಸರಿಯಾದ ಪ್ರತ್ಯಕ್ಷದರ್ಶಿಗಳು ಈ ಪ್ರಕರಣದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಇನ್ನು ನದಿಯಲ್ಲಿ ಸಿಕ್ಕ ಒಂದು ಮೂಳೆ ಮಹಿಳೆಯದ್ದಾಗಿತ್ತು ಎಂದು ತಿಳಿಸಿದ್ದಾರೆ. ಮೇಲ್ಮನವಿಗೆ ಕೋವಿಡ್ ಕಾರಣಕ್ಕೆ ಸ್ವಲ್ಪ ತಡವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಮೃತದೇಹ ಸಿಕ್ಕಿಲ್ಲ.ಮನೆಯಲ್ಲಿ ಸಂಗ್ರಹಿಸಿದ ರಕ್ತದ ಕಲೆಯೂ ಮಹಿಳೆಯದ್ದು ಎಂಬ ವಿರೋಧಾಭಾಸವಿದೆ. ಡಿ.ಎನ್.ಎ ಪರೀಕ್ಷೆಯಲ್ಲೂ ವ್ಯತ್ಯಾಸವಿದೆ ಹಾಗಿದ್ದರೂ ಕೂಡ ತೀರ್ಪು ಬಂದಿದೆ. ಇದನ್ನು ನಾವು ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದರು. ಮೂಳೆಯ ಡಿ.ಎನ್.ಎ ಸಾಬೀತಾಗಿಲ್ಲ. ದುರ್ಗಾ ಇಂಟರ್ ನ್ಯಾಶನಲ್ ಹೊರಟು ಭಾಸ್ಕರ್ ಶೆಟ್ಟಿ ಮನೆಗೆ ಹೋಗಿರುವ ಕುರಿತು ಪ್ರಾಸಿಕ್ಯೂಷನ್ ಸಾಬೀತು ಮಾಡಿಲ್ಲ ಎಂದರು.

ಆರೋಪಿಗಳ ತಪ್ಪೊಪ್ಪಿಗೆ ಪೊಲೀಸರ ಮುಂದೆ ನೀಡಿದ್ದು,, ನ್ಯಾಯಾಲಯದ ಮುಂದೆ ಅಲ್ಲ. ಅದಕ್ಕೆ ಯಾವುದೇ ಬೆಲೆಯಿಲ್ಲವೆಂದು ಪ್ರದೀಪ್ ತಿಳಿಸಿದರು. ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಪ್ರಶ್ನಿಸುತ್ತೇವೆ, ಖಂಡಿತವಾಗಿ ಅವರು ಹೊರ ಬರುತ್ತಾರೆ ಎಂದು ಹೇಳಿದರು.

 
 
 
 
 
 
 
 
 
 
 

Leave a Reply