*ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ಪೋಸ್ಟರ್ ಮತ್ತು ಬ್ಯಾನರ್ ಬಿಡುಗಡೆ

ನಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಬದಲಾವಣೆಗೆ ಮುಂದಾಗೋಣ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಾಷ್ಟ್ರೀಯ ನೇತ್ರ ದಾನ ಸಪ್ತಾಹವನ್ನು ಜಾಗೃತಿ ಮೂಡಿಸುವ ಪೋಸ್ಟರ್ ಮತ್ತು ಬ್ಯಾನರ್ ಬಿಡುಗಡೆ ಮಾಡುವುದರ ಮೂಲಕ ಆಚರಿಸಲಾಯಾಯಿತು. ಇದನ್ನು ಮಣಿಪಾಲ ಕಸ್ತೂರ್ಬಾ  ನಿರ್ವಹಣಾಧಿಕಾರಿ ಸಿ ಜಿ ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ರಾದ ಡಾ.ಅವಿನಾಶ್ ಶೆಟ್ಟಿಯವರು ಜಂಟಿ ಯಾಗಿ ಉದ್ಘಾಟಿಸಿದರು.

ಕಸ್ತೂರ್ಬಾ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗ ದ ಮುಖ್ಯಸ್ಥರಾದ ಡಾ ಸುಲತಾ ಭಂಡಾರಿ, ನೇತ್ರ ನಿಧಿಯ ವೈದ್ಯಕೀಯ ಮುಖ್ಯಸ್ಥರಾದ ಡಾ. ಮನಾಲಿ ಹಝರಿಕ, ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಶ್ರೀ ಸಚಿನ ಕಾರಂತ್ ಉಪಸ್ಥಿತರಿದ್ದರು. ನೇತ್ರ ದಾನದ ಬಗ್ಗೆ ಜಾಗೃತಿ ಮೂಡಿಸಲು ಆಸ್ಪತ್ರೆ ಯ ವಿವಿಧ ಸ್ಥಳಗಳಲ್ಲಿ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭ ದಲ್ಲಿ ಮಾತನಾಡಿದ ಡಾ. ಅವಿನಾಶ್ ಶೆಟ್ಟಿ ಅವರು “ಕುರುಡುತನವು ಅನೇಕ ವರ್ಷಗಳಿಂದ ಭಾರತೀಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ ಮತ್ತು ರಾಷ್ಟ್ರೀಯ ನೇತ್ರ ದಾನ ಸಪ್ತಾಹವು ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತೊಡೆದು ಹಾಕಲು ಮತ್ತು ಜನರು ತಮ್ಮ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡಲು ಪ್ರೇರೇಪಿ ಸುತ್ತದೆ” ಎಂದು ಹೇಳಿದರು.

ಡಾ.ಸುಲತಾ ಭಂಡರಿ, ಅವರು “ರಾಷ್ಟ್ರೀಯ ನೇತ್ರ ದಾನ ಸಪ್ತಾಹವನ್ನು ಪ್ರತಿ ವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ರಾಷ್ಟ್ರೀಯ ಕುರುಡುತನ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಆಚರಿಸ ಲಾಗುತ್ತದೆ. ಪಾರಪಟಲ(ಕಾರ್ನಿಯಾ)ದ ಕುರುಡುತನ ಇರುವವರಿಗೆ ದೃಷ್ಟಿ ನೀಡಲು, ಜನರಲ್ಲಿ ನೇತ್ರದಾನ ಮಾಡಲು ಅಥವಾ ಪ್ರತಿಜ್ಞೆ ಮಾಡಲು ಪ್ರೇರಿಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

2020 ರ ಧ್ಯೇಯ ವಾಕ್ಯ “ನಮ್ಮ ಕಣ್ಣು ಗಳನ್ನು ದಾನ ಮಾಡುವ ಮೂಲಕ ಬದಲಾ ವಣೆಗೆ ಮುಂದಾಗೋಣ”. ಎಂದರು.

 
 
 
 
 
 
 
 
 
 
 

Leave a Reply