ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ 2021-22 ನೇ ಸಾಲಿನವಾರ್ಷಿಕ ಮಹಾಸಭೆಯು ಪರಿಷತ್ತಿನ ಕಟ್ಟಡ ಬ್ರಾಹ್ಮಿ ಸಭಾಭವನದಲ್ಲಿ ಜರುಗಿತು. ಮೊದಲಿಗೆ ಗತ ವರ್ಷದಲ್ಲಿ ನಿಧನರಾದ ಪರಿಷತ್ತಿನ ಸದಸ್ಯರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ವಿವೇಕಾನಂದ ಎನ್. ಗತ ಮಹಾಸಭೆಯ ವರದಿ ಮತ್ತು ವಾರ್ಷಿಕ ವರದಿ ಮಂಡಿಸಿದರು. ಪರಿಷತ್ತಿನ ಕೋಶಾಧಿಕಾರಿ ಶ್ರೀ ಕುಮಾರಸ್ವಾಮಿ ಉಡುಪ ಅವರು ವಾರ್ಷಿಕ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 2021-22 ನೇ ಸಾಲಿನಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವಿಶೇಷ ಸಹಕಾರ ನೀಡಿದ ಶ್ರೀ ರಂಜನ್ ಕಲ್ಕೂರ, ವೈ. ಮಂಜುನಾಥ ರಾವ್ ಶ್ರೀ ನಾರಾಯಣ ಭಟ್ ಹಾಗೂ ರಂಗನಾಥ ಸರಳಾಯ ಇವರನ್ನು ಗೌರವಿಸಲಾಯಿತು.

ಅಶಕ್ತರಿಗೆ ರೂ. 20,000 ವೈದ್ಯಕೀಯ ಸಹಾಯಧನ ವಿತರಿಸಲಾಯಿತು. 2022-23 ನೇ ಸಾಲಿಗೆ ನೂತನ ಪದಾಧಿಕಾರಿಗಳ ಮತ್ತು ಲೆಕ್ಕ ಪರಿಶೋಧಕರ ಆಯ್ಕೆ ನಡೆಯಿತು. ಪರಿಷತ್ತಿಗೆ 15 ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚೈತನ್ಯ ಎಂ.ಜಿ. ಸ್ವಾಗತಿಸಿದರು .ರೇಖಾ,ಸೌಮ್ಯ, ವಿಜಯ ರವಿಪ್ರಕಾಶ ಪ್ರಾರ್ಥಿಸಿದರು . ಪೂರ್ಣಿಮ ಜನಾರ್ಧನ್, ಪದ್ಮಲತಾ ವಿಷ್ಣು, ಸುಮಿತ್ರಾ ಕೆರೆಮಠ ,ಸುನೀತಾ ಚೈತನ್ಯ ಸಹಕರಿಸಿದರು. ಕೊನೆಯಲ್ಲಿ ಶ್ರೀ ರವೀಂದ್ರ ಆಚಾರ್ಯ ಧನ್ಯವಾದ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply