ಉಡುಪಿ ನಗರದ ಚಿನ್ನಾಭರಣ ತಯಾರಕ ಘಟಕದಿಂದ ರಾಸಾಯನಿಕ ಹೊಗೆ- ಸ್ಥಳೀಯರಲ್ಲಿ ಆತಂಕ

ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಚಿನ್ನ ತಯಾರಿಕಾ ಘಟಕವೊಂದು ಹೊರಸೂಸುವ ಹೊಗೆಯು ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ.

ಈ ಘಟಕದ ಸುತ್ತಮುತ್ತ ಅಂಗಡಿ ಮುಗ್ಗಟ್ಟು ದೇವಾಲಯ ಮಸೀದಿ ವಸತಿ ಸಮುಚ್ಚಗಳಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ ಇದರ ಹೊಗೆ ಪರಿಸರದಲ್ಲಿ ದಟ್ಟವಾಗಿ ಆವರಿಸಿದ್ದು ರಾಸಾಯನಿಕಯುಕ್ತ ಈ ಹೊಗೆಯಿಂದ ಮೂಗು ಕಣ್ಣು ಉರಿ, ಕೆಮ್ಮು ಕಾಣಿಸುತ್ತಿದೆ.

ಇದೇ ರೀತಿಯ ಚಿನ್ನಾಭರಣದ ಘಟಕವೊಂದು ಕೇರಳದ ವಸತಿ ಪ್ರದೇಶದಲ್ಲಿದ್ದ ಕಾರಣಕ್ಕಾಗಿ ಅಲ್ಲಿನ ಸ್ಥಳಿಯ ಆಡಳಿತ ಅದರ ಅನುಮತಿಯನ್ನು ರದ್ದುಗೊಳಿಸಿತ್ತು. ಇದೀಗ ಈ ರೀತಿ ರಾಸಾಯನಯುಕ್ತ ಹೊಗೆಯನ್ನು ಹೊರಸುಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಭೀತಿ ಎದುರಾಗಿದೆ.

ಆದುದರಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply