ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ನೂತನ ಸಭಾ ಭವನದ ಶಿಲಾನ್ಯಾಸ ಕಾರ್ಯಕ್ರಮ

ಉಡುಪಿ : ಶ್ರೀ ಶಿರ್ಡಿ ಸಾಯಿಬಾಬಾರ ಎಲ್ಲರನ್ನು ಪ್ರೀತಿಸುವ ಗುಣ ಇಂದು ನಮೆಲ್ಲರನ್ನು ಒಂದು ಸೇರಿಸಿ ಸೇವಾ ಮನೋಭಾವದ ಹಾದಿಯನ್ನು ತೋರಿಸುತ್ತಿದೆ ಎಂದು ಸಿದ್ದನ ಕೊಳ್ಳದ ಡಾ. ಶಿವಕುಮಾರ ಸ್ವಾಮಿಗಳು ಹೇಳಿದರು.

ಇಂದು ಉಡುಪಿ ಕೊಡವೂರಿನ ತೋಟದ ಮನೆಯ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾ ಭವನದ ಶಿಲಾನ್ಯಾಸ ಕಾರ್ಯಕ್ರಮದ ದಿವ್ಯ ಉಪಸ್ಥಿತಿಯನ್ನು ವಹಿಸಿ ಆಶೀರ್ವಚನವನ್ನು ನೀಡಿದರು.

ವಿವಿದ್ದೋದ್ದೇಶ ಹೊಂದಿರುವ ಈ ಸಭಾಂಗಣವು ಅತ್ಯಂತ ತ್ವರಿತಗತಿಯಲ್ಲಿ ನಿರ್ಮಾಣಗೊಂಡು ಆ ಮೂಲಕ ಇಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾಸೋಹದ ಕಾರ್ಯಕ್ರಮ ಸಹಿತ ವಿವಿಧ ಕಾರ್ಯಗಳಿಗೆ ಸಹಕಾರಿಯಾಗಲಿ ಎಂದು ಹೇಳಿದರು.

ಪುತ್ತೂರು ಶ್ರೀನಿವಾಸ ತಂತ್ರಿಗಳ ನೇತ್ರತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂದಿರದ ಟ್ರಸ್ಟಿ ನಾಗರಾಜ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನು ಅಡಿ ನೂತನ ಸಭಾ ಭವನದ ವಿವರಗಳನ್ನು ನೀಡಿದರು. ರಾಜ್ಯ ಬಿಜೆಪಿ ಕಾರ್ಯ ಕಾರಿಣಿಯ ಸದಸ್ಯ ಗುರ್ಮೆ ಸುರೇಶ ಶೆಟ್ಟಿ ಭಕ್ತರ ಪರವಾಗಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಉದ್ಯಮಿ ಮನೋಹರ ಶೆಟ್ಟಿ , ಸುಧಾಕರ ಶೆಟ್ಟಿ ಪೆರ್ಡೂರು, ತೋನ್ಸೆ ವಿಜಯ ಕುಮಾರ್ ಶೆಟ್ಟಿ, ತ್ರಿನೇಶ್ವರ್. ಸಿ .ಪಿ,ಡಾ.ಹರಿಪ್ರಸಾದ ಐತಾಳರ. ಶಿರ್ಡಿಸಾಯಿಬಾಬಾ ಸೇವಾ ಸಮಿತಿಯ ಚೇತನ್ ನಾರ್ವೇಕರ್,ರಾಮದಾಸ್,ವಿಜಯ ಕುಮಾರ್ ಗದ್ದೆಮನೆ, ಮಹಾಬಲ ಕುಂದರ್, ಹಾಗೂ ಸೇವಾ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ದಿವಾಕರ ಶೆಟ್ಟಿ ದಂಪತಿಗಳು ಸ್ವಾಮೀಜಿ ಯವರನ್ನು ದೇವಸ್ಥಾನದ ವತಿಯಿಂದ ಗೌರವಿಸಿದರು.

 
 
 
 
 
 
 
 
 
 
 

Leave a Reply