ಉಡುಪಿ : ವ್ಯಕ್ತಿ ನಾಪತ್ತೆ

ಉಡುಪಿ : ಮರ್ಣೆ ಗ್ರಾಮದ ನಿವಾಸಿ ಸತ್ಯಈಶ ಶೆಟ್ಟಿ (46) ಎಂಬ ವ್ಯಕ್ತಿಯು 2023 ರ
ನವೆಂಬರ್ 7 ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ತುಳು, ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಅಜೆಕಾರು ಪೊಲೀಸ್ ಠಾಣೆ ದೂ.ಸಂ: 08253-271100, ಅಜೆಕಾರು ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ಮೊ.ನಂ 94808054701, ಮೊ.ನಂ: 9480805471, ಕಾರ್ಕಳ ವೃತ್ತ ಪೊಲೀಸ್
ನಿರೀಕ್ಷಕರ ದೂ.ಸಂ: 08258-231083 ಅಥವಾ ಜಿಲ್ಲಾ ಪೊಲೀಸ್ ಕಛೇರಿ ದೂ.ಸಂ: 0820-2534777 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply