ಉಡುಪಿಯಲ್ಲಿ ಸೋಮವಾರದಿಂದ ಆರ್.ಟಿ.ಓ ಸೇವೆ ಲಭ್ಯ

ಉಡುಪಿ: ರಾಜಸ್ವ ಸಂಗ್ರಹಣೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಥಿ 4ಗೆ ಸಂಬಂಧಿಸಿದ ಸೇವೆಗಳಾದ ಚಾಲನೆ ಲೈಸೆನ್ಸ್, ಕಲಿಕಾ ಲೈಸೆನ್ಸ್, ಚಾಲನಾ ಲೈಸೆನ್ಸ್ ನವೀಕರಣ ಸೇವೆ ಜೂ. 21ರ ಸೋಮವಾರದಿಂದ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಕಾರ್ಯಾರಂಭ ಮಾಡಲಿದೆ ಎಂದು ಆರ್.ಟಿ.ಓ ಜೆ. ಪಿ. ಗಂಗಾಧರ್ ತಿಳಿಸಿದ್ದಾರೆ.

ಈ ಬಗ್ಗೆ ಇನ್ನಿತರ ಮಾಹಿತಿಗಳನ್ನು ಪರಿವಾಹನ, ಸಾರಥಿ 4 ತತ್ರಾಂಶದಡಿಯಲ್ಲಿ ಇ- ಪೋರ್ಟ್ ನಲ್ಲಿ ಪಡೆಯಬಹುದು.ಉಡುಪಿ ಜಿಲ್ಲೆಯಲ್ಲಿ ಜೂ. 11ರಿಂದ 18ರ ವರೆಗೆ 545 ಮಂದಿ ಖಾಸಗಿ ಪ್ರಯಾಣಿಕ ವಾಹನ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಆ ಮೂಲಕ ಬಸ್ ಚಾಲನೆ ಕರ್ತವ್ಯಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಆರ್.ಟಿ.ಓ ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply