“ಸಮುದಾಯ ಬಾನುಲಿ ಧ್ವನಿಸೋತವರ ಧ್ವನಿ ಮಾಧ್ಯಮ”- ಡಾ ರಶ್ಮಿ ಅಮ್ಮೆಂಬಳ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ಪ್ರೊ.ಓ.ಎಸ್.ಅಂಚನ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ರೇಡಿಯೋ ಮಣಿಪಾಲದ ಅಧಿಕಾರಿ ಡಾ ರಶ್ಮಿ ಅಮ್ಮಂಬಳ ‘ ಬಾನುಲಿಪ್ರಸಾರ ಮತ್ತು ‘ಸಮುದಾಯ ಬಾನುಲಿ ಕೇಂದ್ರವಾಗಿ ರೇಡಿಯೋ ಮಣಿಪಾಲ’ ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡುತ್ತಾ ಸಮುದಾಯ ಬಾನುಲಿ ಅಗ್ಗದ,ಆಪ್ತ ಮಾಧ್ಯಮ.ಅದು ಧ್ವನಿ ಸೋತವರಿಗೆ ಧ್ವನಿ ನೀಡುವ ಮಾಧ್ಯಮ. ಸ್ಥಳೀಯತೆ,ಸಾಮುದಾಯಿಕ ಭಾಗಿತ್ವ ಮತ್ತು ಸಮುದಾಯ ಅಭಿವೃದ್ಧಿ ಅದರ ಪ್ರಧಾನ ಉದ್ದೇಶ ಎಂದು ನುಡಿದು ಕಳೆದ ಹದಿನೈದು ವರ್ಷಗಳಲ್ಲಿ ರೇಡಿಯೋ ಮಣಿಪಾಲ ಸಾಗಿಬಂದ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡಿ ಸಮುದಾಯ ಬಾನುಲಿ ನಿಜಕ್ಕೂ ಜನ ಪ್ರತಿಭಟನೆಯ ಮಾಧ್ಯಮವಾಗಿ ಬೆಳೆಯಬೇಕಾಗಿತ್ತು.ಆಳುವವರಿಗೆ ನೊಂದವರ ,ಶೋಷಿತರ ಅಳಲು,ಅಹವಾಲುಗಳನ್ನು ಮುಟ್ಟಿಸುವ ಮಾಧ್ಯಮವಾಗಬೇಕಾಗಿತ್ತು.ಹಾಗಾಗದಿರುವುದು ವಿಷಾದನೀಯ ಎಂದರಲ್ಲದೆ ಮಣಿಪಾಲ ರೇಡಿಯೋಗೆ ಸ್ಥಳೀಯ ಶೈಕ್ಷಣಿಕ ಸಂಪನ್ಮೂಲಗಳನ್ನು ಭರಪೂರ ಬಳಸಿಕೊಳ್ಳುವ ಚೈತನ್ಯ ಒದಗಲಿ.ಮಣಿಪಾಲ ವಿಶ್ವವಿದ್ಯಾಲಯ ಈ ಬಾನುಲಿ ಕೇಂದ್ರದ ಉನ್ನತಿಗೆ ಹೆಚ್ಚಿನ ಗಮನ ಕೊಡುವ ಹಾಗಾಗಲಿ ಎಂದರು. ಶ್ರೀ ಪರಸು ದುರ್ಗಪ್ಪ ಸ್ವಾಗತ ಕೋರಿದರೆ ಶ್ರೀ ಶ್ರೀ ಧರ ಹೆಗಡೆ ವಂದನಾರ್ಪಣೆ ಗೈದರು.ಶ್ರೀ ಮತಿ ಸ್ನೇಹ ಜೋಸ್ವಿಟ ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರೆ ಶ್ರೀ ಕಿರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply