ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ

ರೇಡಿಯೋ ಮಣಿಪಾಲ್ 90.4 Mhz

-ದೇಸಿ ಸೊಗಡು

ಸಮುದಾಯ ಬಾನುಲಿ ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್ ಮತ್ತು ಯುನಿಸೆಫ್ ನ ಸಹಯೋಗದಲ್ಲಿ ಮೂಡು ಅಲೆವೂರಿನ ಅಂಗನವಾಡಿ ಕೇಂದ್ರದಲ್ಲಿ ಸ್ಥಳೀಯ ಮಹಿಳೆಯರಿಗಾಗಿ 

 ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಣಿಪಾಲ ಕೆ.ಎಂ.ಸಿಯ ಸಮುದಾಯ ವೈದ್ಯಕೀಯ ವಿಭಾಗದ ವೈದ್ಯಕೀಯ ಸಮಾಜಸೇವಕಿ ನೀಲಾವತಿ* ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ‘ಕೊರೋನ ಕಾಲಘಟ್ಟದಲ್ಲಿ ಎದೆಹಾಲೂಡುವ ತಾಯಂದಿರು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಪೌಷ್ಠಿಕ ಆಹಾರ ಮತ್ತು ಪಥ್ಯದ ಕುರಿತು ಮಾಹಿತಿ ನೀಡಿ ಮಹಿಳೆಯರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಅಲೆವೂರು ಅಂಗನವಾಡಿ ಕೇಂದ್ರದ ಶಿಕ್ಷಕಿ ಭಾರತಿ,ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತಾರಾ, ರೇಡಿಯೋ ಮಣಿಪಾಲದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರು ಸಹಕರಿಸಿದರು.

 ..

ರೇಡಿಯೋ ಮಣಿಪಾಲ,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply