ಗೀತಾಮಂದಿರದಲ್ಲಿ ನೂತನ ಸಭಾಂಗಣ ಹಾಗೂ ಕೋಟಿಗೀತಾ ಲೇಖನ ಯಜ್ಞದ ಕಚೇರಿ ಉದ್ಘಾಟನೆ

ಉಡುಪಿಯ ಪುತ್ತಿಗೆ ಮಠದ ಗೀತಾ ಮಂದಿರದಲ್ಲಿ ನೂತನ ಸಭಾಂಗಣ ಹಾಗೂ ಕೊಟಿಗೀತಾ ಲೇಖನ ಯಜ್ಞದ ಕಛೇರಿಯನ್ನು ಉದ್ಘಾಟಿಸಿ ಮಾತಾಡಿದ ಪರಮಪೂಜ್ಯ ಶ್ರೀ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ಭಗವದ್ಗೀತೆ ಶ್ರೀ ಕೃಷ್ಣನ ಇನ್ನೊಂದು ರೂಪವೇ ಅದನ್ನು ಜನರಿಗೆ ದೇಶ ವಿದೇಶಗಳಲ್ಲಿ ಭಕ್ತರಿಗೆ ಪರಿಚಯಿಸುವ ಮೂಲಕ ಪುತ್ತಿಗೆ ಶ್ರೀಗಳ ಈ ಕೋಟಿ ಗೀತಾ ಲೇಖನ ಯಜ್ಞದ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸಿ, ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಯೋಜನೆಯಲ್ಲಿ ಎಲ್ಲರೂ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು, ಭಗವದ್ಗೀತೆ ಬರೆಯುದರಿಂದ ಸಕಲ ಕಷ್ಟಗಳೂ ನಿವಾರಣೆಯಾಗುವುದು ಎಂದು ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೀತಾಮಂದಿರದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

 
 
 
 
 
 
 
 
 
 
 

Leave a Reply