ನೂತನ್ ಸಿಲ್ಕ್ಸ್ ನ ಕುಲ್ಯಾಡಿ ಪುಂಡಲಿಕ್ ಪೈ ನಿಧನ

ಸಂಸ್ಥೆಯ ಆಜೀವ ಸದಸ್ಯರಾಗಿದ್ದ ಉಡುಪಿಯ ಹೆಸರಾಂತ ಬಟ್ಟೆ ಮಳಿಗೆ ನೂತನ್ ಸಿಲ್ಕ್ಸ್ ಹಾಗೂ ಕುಲ್ಯಾಡಿಕಾರ್ ಸಿಲ್ಕ್ಸ್ ನ ಪಾಲುದಾರ ಕುಲ್ಯಾಡಿ ಪುಂಡಲೀಕ ಪೈ (81 ವರ್ಷ) ನಿನ್ನೆ (08-03-2023) ವಯೋಸಹಜ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸಂಸ್ಥೆಯ ತಾಳಮದ್ದಲೆ‌ ಸಪ್ತಾಹದ ಆರಂಭದ ವರ್ಷಗಳಲ್ಲಿ ನಿರಂತರ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.

 
 
 
 
 
 
 
 
 
 
 

Leave a Reply