“ಐತಿಹಾಸಿಕ ಪರಂಪರೆ ಉಳಿಸಿ” ಜಾಗೃತಿ ಕಾರ್ಯಕ್ರಮ

ಕುಂಜೂರು :‌ ಹೀಗೆ ಇದ್ದಿತೆಂದು‌ ನಿರೂಪಿಸುವ ಸತ್ಯ ಕಥೆಯೇ ಇತಿಹಾಸ.ಇಂತಹ ಅಮೂಲ್ಯ ಪಾರಂಪರಿಕ ಮೌಲ್ಯಗಳಿರುವ ದಾಖಲೆಗಳನ್ನು ಮನನ ಮಾಡಿಕೊಳ್ಳುವ ,ಕಾಪಿಡುವ ಪ್ರಯತ್ನವಾಗಿ “ಐತಿಹಾಸಿಕ ಪರಂಪರೆ ಉಳಿಸಿ” ಎಂಬ ಕಾರ್ಯಕ್ರಮ ರಾಜ್ಯದಾದ್ಯಂತ ನಡೆಯುತ್ತಿದೆ.ಪ್ರಾಚ್ಯ ವಸ್ತುಗಳ ಅಧ್ಯಯನದಿಂದ,ಲಿಖಿತ ದಾಖಲೆಗಳ‌ ಆಧಾರದಲ್ಲಿ‌ ಇತಿಹಾಸವನ್ನು ಕಟ್ಟಬಹುದು ಎಂದು ಅದಮಾರಿನ‌ ಪೂರ್ಣಪ್ರಜ್ಞ ಪ.ಪೂ.ಕಾಲೇಜಿನ ಉಪನ್ಯಾಸಕ‌ ವೈ. ಜ್ಯೋತೀಂದ್ರನಾಥ ರಾವ್ ಅಭಿಪ್ರಾಯಪಟ್ಟರು.
‌‌ ಅವರು ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಶ್ರಯದಲ್ಲಿ ಸ್ಥಳೀಯ ದುರ್ಗಾ ಮಿತ್ರವೃಂದ , ದುರ್ಗಾ ಸೇವಾ ಸಮಿತಿಗಳ ಸಹಯೋಗದಲ್ಲಿ‌ ನೆರವೇರಿದ ಬೆಂಗಳೂರಿನ ಇತಿಹಾಸ ಅಕಾಡೆಮಿಯ “ಐತಿಹಾಸಿಕ ಪರಂಪರೆ ಉಳಿಸಿ” ಕಾರ್ಯಕ್ರಮದಲ್ಲಿ‌ ಪ್ರಧಾನ ಭಾಷಣಮಾಡುತ್ತಿದ್ದರು.

ನಮ್ಮಲ್ಲಿ ಲಭ್ಯವಿರುವ ಪುರಾವಸ್ತುಗಳು,
ಶಿಲಾಶಾಸನಗಳು,ತಾಮ್ರ ಪಟಗಳು ,ಧಾರ್ಮಿಕ ನಿರ್ಮಿತಿಗಳು,ಕಟ್ಟಡಗಳು, ಪುರಾತನ ಕಡತಗಳು‌‌,ನಾಣ್ಯಗಳು ಒಂದು ಕಾಲದ ಇತಿಹಾಸವನ್ನು ಹೇಳುತ್ತವೆ ಇಂತಹ ಅಮೂಲ್ಯ ಪುರಾತನ ಉಳಿಕೆಗಳು ಕಾಲಕಾರಣವಾಗಿ ಅಥವಾ ಮಾನವ ನಿರ್ಲಕ್ಷ್ಯದಿಂದ ನಾಶವಾಗದಂತೆ ರಕ್ಷಿಸುವ ಜಾಗೃತಿ ಮೂಡಿಸುವ ಕಾರ್ಯಕ್ರಮವೇ “ಐತಿಹಾಸಿಕ ಪರಂಪರೆ ಉಳಿಸಿ” ಆಭಿಯಾನ ಎಂದು ಜ್ಯೋತೀಂದ್ರನಾಥ ರಾವ್ ವಿವರಿಸಿದರು.
ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದೇವರಾಜ ರಾವ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ಗುತ್ತು ಪ್ರಫುಲ್ಲ ಶೆಟ್ಟಿ,
ಎಲ್ಲೂರು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಜೀವ ಶೆಟ್ಯಿ,ಸಂತೋಷ ಶೆಟ್ಟಿ, ಗಿರಿಜಾ ಪೂಜಾರ್ತಿ,ದೇವಳದ ಮ್ಯಾನೇಜರ್ ರಾಘವೇಂದ್ರ ಶೆಟ್ಟಿ,ದುರ್ಗಾಮಿತ್ರ ವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ ಉಪಸ್ಥಿತರಿದ್ದರು .

ರಾಕೇಶ್ ಕುಂಜೂರು ಸ್ವಾಗತಿಸಿದರು,ಕೆ.ಎಲ್ ಕುಂಡಂತಾಯ ಪ್ರಸ್ತಾವಿಸಿದರು.ಸತೀಶ ಶೆಟ್ಟಿ‌ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply