ವೇದ ಮೂರ್ತಿ ಕಾಶೀನಾಥ್ ಭಟ್ರ ಕೈಯಲಿ ಅರಳಿದ; ದರ್ಬೆಯ ಅನಂತ ಶೇಷನಾಗ

ಉಡುಪಿ ಸಮೀಪದ ಗ್ರಾಮೀಣ ಪ್ರದೇಶವಾದ ಕಲ್ಯಾಣಪುರ ಶ್ರೀ ರಾಮಂಜೇನೆಯ ದೇವಸ್ಥಾನದ ಅರ್ಚಕರಾದ ವೇದ ಮೂರ್ತಿ ಕಾಶೀನಾಥ್ ಭಟ್ , .ಇವರು ಕಳೆದ 35 ವರ್ಷಗಳಿಂದ ಶ್ರೀ ಅನಂತ ಪದ್ಮನಾಭ ವೃತ ಕ್ಕೆ ( ನೋಪಿ ) ಪೂಜೆಗೆ ಅಗತ್ಯವಾಗಿ ಬೇಕಾದ ಅನಂತ ಶೇಷನಾಗ , ವಿಶೇಷ ವಾಗಿ ಅಷ್ಟ ಪವಿತ್ರ ನಾಗಮಂಡಲದ ಸ್ವರೂಪ ದಲ್ಲಿ ದರ್ಬೆ ಮುಖೇನ ಏಳು ಹೆಡೆಯ ನಾಗದೇವರ ಬಿಂಬ ಸ್ವರೊಪದ ಕಲಾಕೃತಿ ರಚನೆ ಮಾಡಿ ಉಡುಪಿ ಆಸುಪಾಸು ದೇವಳಕ್ಕೆ ಉಚಿತವಾಗಿ ನೀಡುತ್ತಿದ್ದಾರೆ.

 ಜಿ ಎಸ್ ಬಿ ಸಮಾಜದ ಪುರೋಹಿತ ವೇದ ಮೂರ್ತಿ ಕಾಶಿ ಭಟ್ಟರ ತಂದೆ ಹರಿನಾರಾಯಣ ಭಟ್ಟರಿಂದ ಕಲಿತ ಈ ದರ್ಬೆಯ ಕಲಾ ಕೃತಿಗೆ ಬೇಕಾದ ದರ್ಬೆಗಳನ್ನು ಕೆಮ್ಮಣ್ಣು ನಿಂದ ತಂದು ಅವರ ಶ್ರೀ ರಾಮ ನಿವಾಸದಲ್ಲಿ 15 ದಿನಗಳ ಕಾಲ ನಿರಂತರ ದರ್ಬೆಗಳನ್ನು ಸಮತೊಟ್ಟು ಗೊಳಿಸಿ ಹೆಣೆದು 2 ಅಡಿ ಎತ್ತರದ ಏಳು ಹೆಡೆಯ ನಾಗದೇವರ ಬಿಂಬ ಸ್ವರೊಪದ ಕಲಾಕೃತಿ ರಚನೆ ಮಾಡುವರು ಈ ಬಾರಿ ಸುಮಾರು 19 ಬಿಂಬ ಕಲಾಕೃತಿ ರಚಿಸಿ ಉಡುಪಿ ಸಮೀಪದ ಉದ್ಯಾವರ ವೀರ ವಿಠಲ್ ದೇವಸ್ಥಾನ , ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ , ತೆಂಕಪೇಟೆಯ ಆಚಾರ್ಯ ಮಠ , ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನ , ಬ್ರಹ್ಮಾವರ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ , ಹಾಗೂ ಹಿರಿಯ ಮನೆತನದ ದೇವರ ಪೂಜೆಗೆ ಉಚಿತವಾಗಿ ನೀಡುತ್ತಾ ಬಂದಿದ್ದಾರೆ ತರಬೇತಿ ; ಬಹು ಅಪರೊಪದ ಈ ಕಲಾಕೃತಿ ಕಲೆಯನ್ನು ತಮ್ಮ ಜೊತೆಯಲ್ಲಿ ಕಾರ್ಯ ನಿರ್ವಹಿಸುವ ಅರ್ಚಕರಿಗೆ ,ಮಕ್ಕಳಿಗೆ ,ಪತ್ನಿ ಭಾಗ್ಯಲಕ್ಷ್ಮೀ ಭಟ್ , ಸೂಸೆ ಯಾಂದಿರಿಗೆ ತರಬೇತಿ ನೀಡುತ್ತಾ ದೇವರ ಸೇವೆಯನ್ನು ಮಾಡುವುದರ ಜೊತೆಗೆ ಕಲೆ ಉಳಿಸಿ – ಬೆಳಸುವ ಪ್ರಯತ್ನ ಇವರದಾಗಿದೆ.

ಉಡುಪಿ ನಯಂಪಳ್ಳಿ ಕಾಶೀಮಠ , ಶ್ರೀ ರಾಮ ಮಂದಿರ ದೊಂಡೇರಂಗಡಿ , ಶ್ರೀ ವೀರ ವಿಠಲ್ ದೇವಸ್ಥಾನ ಭದ್ರಗಿರಿ , ಶ್ರೀ ರಾಮಂಜೇನೆಯ ದೇವಸ್ಥಾನ ಕಲ್ಯಾಣಪುರ , ಹಾಗೂ ದೇವಸ್ಥಾನದ ಧಾರ್ಮಿಕ ಕಾರ್ಯ , ಹೋಮ , ಯಜ್ಞ ದಿಗಳಲ್ಲಿ , ನಾಗಮಂಡಲ , ಆಶ್ಲೇಷಾ ಬಲಿ , ನಾಗ ಪ್ರತಿಷ್ಠೆ ಗಳಲ್ಲಿ ಸೇವೆ ನೀಡುತ್ತಿದ್ದಾರೆ.

 
 
 
 
 
 
 
 
 
 
 

Leave a Reply