ರೈತರೊಂದಿಗೆ ಜೆಸಿಐ ಸಂಘಟನೆ ಸಂವಾದ, ಸನ್ಮಾನ

ಕೋಟ: ಜೆಸಿಐ ಕಲ್ಯಾಣಪುರ ಮಹಿಳಾ ಘಟಕದ ವತಿಯಿಂದ ರೈತರೆಡೆಗೆ ನಮ್ಮ ನಡಿಗೆ, ರೈತರೊಂದಿಗೆ ಸಂವಾದ ,ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ರೈತಧ್ವನಿ ಸಂಘದ ಅಧ್ಯಕ್ಷ ಮಣೂರು ಜಯರಾಮ ಶೆಟ್ಟಿ ಮನೆಯಂಗಳದಿ ನಡೆಯಿತು.
ಈ ಸಂದರ್ಭದಲ್ಲಿ ಸಾಧಕ ಕೃಷಿಕರಾದ ಜಯರಾಮ ಶೆಟ್ಟಿ, ಸಾಧಾಮ್ಮ ಶೆಡ್ತಿ ಹಾಗೂ ಲಕ್ಷ್ಮಿ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು.

ಸಂವಾದಲ್ಲಿ ಮಾತನಾಡಿದ ಜಯರಾಮ ಶೆಟ್ಟಿ ಇತ್ತೀಚಿಗಿನ ದಶಕಗಳಲ್ಲಿ ಕೃಷಿಯಲ್ಲಿ ಸಾಂಪ್ರದಾಯ ಕೃಷಿ ಮರೆಯಾಗಿ ಅಧುನಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಇದು ಕೃಷಿ ಪರಂಪರೆಯ ಮರೆಯಾಗುವ ಒಂದು ಸನ್ನಿವೇಶವಾಗಿದೆ.ಆಧುನಿಕ ಕೃಷಿ ಅಗತ್ಯತೆ ಜೊತೆ ಸಂಪ್ರದಾಯಕ ಕೃಷಿ ಮರಾಯಾಗದಂತೆ ನೋಡಿಕೊಳ್ಳಬೇಕು ಅಲ್ಲದೆ ಸಮಗ್ರ ಕೃಷಿ ನೀತಿಯನ್ನು ಪ್ರತಿಯೊರ್ವರು ಅನುಸರಿಸಬೇಕು ಇದರಿಂದ ಲಾಭದಾಯಕವಾಗಲು ಸಾಧ್ಯ ಎಂದು ಮನಗಾಣಿಸಿದರು.ಸರಕಾರ ಕೃಷಿಗೆ ಸಾಕಷ್ಟು ಉತ್ತೇಜನ ನೀಡಬೇಕು ರೈತರು ಬೆಳೆದ ಬೆಳೆಗೆ ಸಮರ್ಪಕ ದರ ನಿಗದಿಪಡಿಬೇಕು ತನ್ಮೂಲ ರೈತರ ಆತ್ಮಬಲ ವೃದ್ಧಿಸುವ ಕಾರ್ಯ ಮಾಡಬೇಕು ಎಂದು ಒತ್ತಿಹೇಳಿದರು.

ಜೆಸಿಐ ಕಲ್ಯಾಣಪುರ ಇದರ ಮಹಿಳಾ ವಿಭಾಗದ ಘಟಕಾಧ್ಯಕ್ಷೆ ಅನಿತಾ ನರೇಂದ್ರ ಕುಮಾರ್ ಕೋಟ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುಸ್ಕ್ರತ ಭಾಸ್ಕರ ಮಣೂರು,ಪ್ರಗತಿಪರ ಕೃಷಿಕ ರಮೇಶ್ ಪೂಜಾರಿ, ಜೆಸಿಐ ಕಲ್ಯಾಣಪುರ ಸ್ಥಾಪಾಕಾಧ್ಯಕ್ಷ ಜಗದೀಶ್ ಕೆಮ್ಮಣ್ಣು, ಪೂರ್ವಾಧ್ಯಕ್ಷೆ ಆಶಾ ಅಲನ್,ನಿರ್ದೇಶಕರಾದ ಲವೀನಾ ಲೂಯಿಸ್ ರೋಹಿಣಿ, ಸವಿತಾ ಪಾಲ್ಗೊಂಡರು.

ಜೆಸಿಐ ಕಲ್ಯಾಣಪುರ ಮಹಿಳಾ ಘಟಕದ ವತಿಯಿಂದ ರೈತರೆಡೆಗೆ ನಮ್ಮ ನಡಿಗೆ, ರೈತರೊಂದಿಗೆ ಸಂವಾದ ,ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಸಾಧಕ ಕೃಷಿಕರಾದ ಜಯರಾಮ ಶೆಟ್ಟಿ, ಸಾಧಾಮ್ಮ ಶೆಡ್ತಿ ಹಾಗೂ ಲಕ್ಷ್ಮಿ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು.

 
 
 
 
 
 
 
 
 
 
 

Leave a Reply