94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರ – ಶಾಸಕ ರಘುಪತಿ ಭಟ್ ವಿತರಣೆ

ಉಡುಪಿ : ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕ ಶ್ರೀ ಕೆ. ರಘುಪತಿ ಭಟ್ ಇಂದು ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ವಿತರಿಸಿದರು.

ಸುಮಾರು 20 ವರ್ಷಗಳಿಂದ ವಾಸವಾಗಿರುವ ಹಂದಾಡಿ ಗ್ರಾಮದ ನಿವಾಸಿ ಪ್ರಮೋದಿನಿ, ಶಾರದಾ ಶೆಟ್ಟಿಗಾರ್, ಸುಲೋಚನಾ, ಹಾರಾಡಿ ಗ್ರಾಮದ ನಿವಾಸಿ ಗಿರಿಜಾ ಪೂಜಾರ್ತಿ, ಹೇರೂರು ಗ್ರಾಮದ ನಿವಾಸಿ ಪ್ರೇಮ ಕುಮಾರಿ, ಸೇರಿದಂತೆ ಒಟ್ಟು ಐದು ಫಲಾನುಭವಿಗೆ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ವಿತರಿಸಲಾಯಿತು.

ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ಕೋಶಾಧಿಕಾರಿ ಉದಯ್ ಕಾಮತ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಧೀರ್ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷ ಮೀರಾ ಸದಾನಂದ ಪೂಜಾರಿ, ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್, ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಪೂಜಾರಿ, ಹಾವಂಜೆ ಗ್ರಾಮ ಪಂಚಾಯತ್ ಸದಸ್ಯ ಉದಯ್ ಕೋಟ್ಯಾನ್ ಹಾಗೂ ಬ್ರಹ್ಮಾವರ ತಹಶೀಲ್ದಾ ರಾಜಶೇಖರ್, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply