ಶ್ರೀ ವಿಜಯ ಎಂ. ಬಂಗೇರರವರಿಂದ ಫಿಶರೀಸ್ ಶಾಲೆಗೆ ನೋಟ್ ಪುಸ್ತಕಗಳ ಕೊಡುಗೆ

ಮಲ್ಪೆ ಸರಕಾರಿ ಫಿಶರೀಸ್ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಹಿರಿಯ ಸದಸ್ಯರಾದ ಶ್ರೀ ವಿಜಯ ಎಂ. ಬಂಗೇರರವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು ₹ 7,500/- ಮೌಲ್ಯದ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ. ಇದನ್ನು ಹಳೆ ವಿದ್ಯಾರ್ಥಿ ಸಂಘದ ಮುಖಾಂತರ ತಾ.19/06/2023ರಂದು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಕೊಡುಗೆಗೆ ನಮ್ಮ ಹಿರಿಯ ಸದಸ್ಯರೂ, ಹಿ. ಪ್ರಾ. ಶಾಲಾಡಳಿತ ಸಮಿತಿಯ ಉಪಾಧ್ಯಕ್ಷರೂ ಆಗಿರುವ ಶ್ರೀ ಕೇಶವ ಶ್ರೀಯಾನ್ ರವರು ಸಹಕಾರ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಹಳಿ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply