ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಮ್ಮಾರಬೆಟ್ಟುವಿನಲ್ಲಿ ಶಿಕ್ಷಕರಿಗೆ ಗೌರವಾರ್ಪಣೆ

ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ, ಹಿರಿಯಡಕ ಘಟಕ ಹಾಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮವು ಇಂದು (ದಿನಾಂಕ :05-09-2023) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಮ್ಮಾರಬೆಟ್ಟು (ಕೊಂಡಾಡಿ) ಇಲ್ಲಿ ನಡೆಯಿತು.

ಶಾಲಾ ಮುಖ್ಯೋಪಾಯಿನಿ ಶ್ರೀಮತಿ ಜ್ಯೋತಿ ಡಿ. ಶಿಕ್ಷಕರಾದ ಶ್ರೀಮತಿ ವಿನೋದಾ ಬಿ., ಶ್ರೀಮತಿ ವಸುಂದರಾ ಭಟ್, ಶ್ರೀಮತಿ ಹೇಮಾವತಿ, ಶ್ರೀಮತಿ ಶ್ವೇತಾ ಭಟ್, ಶ್ರೀಮತಿ ಪ್ರತೀಮಾ ಶೆಟ್ಟಿ, ಶ್ರೀಮತಿ ಮಂಜುಳಾ, ಕುಮಾರಿ ಸ್ವಾತಿ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಾದ ಶ್ರೀಮತಿ ವಸಂತಿ ಶೆಟ್ಟಿ, ಶ್ರೀಮತಿ ಲತಾ, ಶ್ರೀಮತಿ ಸುಜಾತಾ ಇವರನ್ನು ಗೌರವಾದರಗಳಿಂದ ಸನ್ಮಾನಿಸಿ, ಗುರುವಂದನೆ ಸಲ್ಲಿಸಲಾಯಿತು.

ಶಾಲಾ ಮುಖ್ಯೋಪಾಯಿನಿ ಶ್ರೀಮತಿ ಜ್ಯೋತಿ ಡಿ. ಯವರು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಲ್ಲಿಸಿದ ಗೌರವಕ್ಕೆ ಅತೀವ ಸಂತಸವನ್ನು ವ್ಯಕ್ತಪಡಿಸಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಯುವ ಸಂಘಟನೆ ಯ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಶಾಲಾ ಅಭಿವೃದ್ಧಿ ಕೆಲಸಗಳಿಗೂ ಸಹಕಾರ ನೀಡುವಂತೆ ವಿನಂತಿಸಿದರು.

ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀಯುತ ರಾಜೇಂದ್ರ ಸುವರ್ಣ ಹಿರಿಯಡ್ಕ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಘಟಕದ ಅಧ್ಯಕ್ಷರಾದ ಶ್ರೀ ಮಹೇಶ್ ಪುತ್ರನ್ ಹಿರೇಬೆಟ್ಟುಅಧ್ಯಕ್ಷತೆ ವಹಿಸಿದ್ದರು., ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಿಜಯ ಮೆಂಡನ್, ಕಾರ್ಯದರ್ಶಿಯವರಾದ ಶ್ರೀ ಮಹೇಶ್ ಪುತ್ರನ್ ಶೆಟ್ಟಿಬೆಟ್ಟು ಮಾಜಿ ಅಧ್ಯಕ್ಷರುಗಳಾದ ಶ್ರೀ ನವೀನ್ ಕೆ. ಶೆಟ್ಟಿ ಬೆಟ್ಟು, ಶ್ರೀ ಪ್ರಮೋದ್ ಸುವರ್ಣ, ಪದಾಧಿಕಾರಿಗಳಾದ ಶ್ರೀ ಮಂಜುನಾಥ್ ಮದಗ, ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.

Leave a Reply