“ಬೇಬಿ ಸೇವಾಶ್ರಮ”ದಿಂದ ನಿರ್ಗತಿಕ ರೋಗಿಗೆ ಚಿಕಿತ್ಸೆ ನೀಡಿ ಬಂಧುಗಳಿಗೆ ಹಸ್ತಾಂತರ

ಸುರತ್ಕಲ್ : ಇಲ್ಲಿ ಬಸ್ ಸ್ಟಾಂಡ್ ಒಂದರಲ್ಲಿ ಕಾಲುಮುರಿತಕ್ಕೆ ಒಳಗಾಗಿ ನಿರ್ಗತಿಕನಾಗಿ ಬಿದ್ದವನನ್ನು “ಬೇಬಿ ಸೇವಾಶ್ರಮ”ವು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ,ಈ ರೋಗಿಯ ಬಂಧುಗಳ ಸಂಪರ್ಕಿಸಿ ಹಸ್ತಾಂತರದ ಕಾರ್ಯ ಸೆ.11ರಂದು ನಡೆಯಿತು.

ಈ ರೋಗಿ ಜಗನ್ನಾಥರು ಕಳೆದ ವರುಷದ ಹಿಂದೆ ಅಪಘಾತಕ್ಕೆ ಸಿಲುಕಿ ಕಾಲಿಗೆ ಪೆಟ್ಟಾಗಿತ್ತು. ಅಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.ಅದರೆ ಈ ರೋಗಿ ಮುಂದುವರಿಕಾ ಚಿಕಿತ್ಸೆಗೆ ತೊಡಗದೆ ಬಂಧುಗಳಿಂದ ದೂರವಿದ್ದರು.ಈ ನಿಟ್ಟಿನಲ್ಲಿ ಕಾಲು ನೋವು ವಿಪರೀತವಾಗಿ ಸುರತ್ಕಲ್ ಪರಿಸರದ ಬಸ್ ಸ್ಟೇಂಡ್ ನಲ್ಲಿ ಚಲಿಸಲು ಅಸಹಾಯಕತೆ ಯಿಂದ ಬಳಲುತಿದ್ದರು.ಇದನ್ನು ಕಂಡ ಸಮಾಜಸೇವಕ ಬಾಸ್ಕರ ಪೂಜಾರಿ ಕೃಷ್ಣಾಪುರ ಶ್ರೀಗುರುಚೈತನ್ಯ ಸೇವಾಪ್ರತಿಷ್ಟಾನ ಕ್ಕೆ ಕರೆ ಮಾಡಿ ಸಹಾಯಕ್ಕಾಗಿ ವಿನಂತಿಸಿದರು.

ಇದಕ್ಕೆ ತುರ್ತಾಗಿ ಸ್ಪಂದಿಸಿ ಇವರ ಆಶ್ರಯಕ್ಕಾಗಿ ಉಡುಪಿ ಅಂಬಲಪಾಡಿ ಯ “ಬೇಬಿ ಸೇವಾಶ್ರಮ”ಕ್ಕೆ ದಾಖಲಿಸಿ ಈ ರೋಗಿಯ ಬಂಧುಗಳ ಸಂಪರ್ಕಿಸಿ ರೋಗಿಯನ್ನು ದ.ಕ.ಜಿಲ್ಲಾಸ್ಪತ್ರೆಗೆ ದಾಖಲಿಸಿ ಕಾಲು ಮೂಳೆ ತುಂಡಾದದ್ದಕ್ಕೆ ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಜೋಡಿಸಿದರು. ಬೇಬಿ ಸೇವಾಶ್ರಮದ ಕೋರಿಕೆಯ ಮೇರೆಗೆ ವೆನ್ಲಾಕ್ ಅಸ್ಪತ್ರೆಯು ಈ ರೋಗಿಯ ಚಿಕಿತ್ಸೆಯನ್ನು ಉಚಿತವಾಗಿ ಮಾಡಿತು .ಹಾಗೆ ಹೆಚ್ಚುವರಿ ಸರ್ಜಿಕಲ್ ವಸ್ತುಗಳ ಹಾಗು ಇತರ ಕರ್ಚಿನ ಬಾಬ್ತನ್ನು ಈ ರೋಗಿಯ ಸಹೋದರಿಯು ಹೊಂದಿಸಿ “ಬೇಬಿ ಸೇವಾಶ್ರಮ”ಕ್ಕೆ ಧನ್ಯವಾದ ಅರ್ಪಿಸಿದರು

ಈ ರೋಗಿಯ ಬಂಧುಗಳ ಊರಿನವರಾದ, ಸಮಾಜಸೇವಕ ಸಿದ್ದಕಟ್ಟೆಯ ಗೋಪಾಲ್ ಕುಲಾಲ್ ರವರಿಗೆ ಈ ರೋಗಿಯ ಬಂಧುಗಳ ಒಪ್ಪಿಗೆಯ ಮೇರೆಗೆ ಈ ರೋಗಿಯನ್ನು “ಬೇಬಿ ಸೇವಾಶ್ರಮ”ದ ಆಡಳಿತ ನಿರ್ದೇಶಕರಾದ ಬಬಿತಾ ರಾಜೇಶ್ ಹಸ್ತಾಂತರಿಸಿದರು.

ರೋಗಿಯನ್ನು ದಾಖಲಿಸಿ ಅಸ್ಪತ್ರೆಗೆ ಭೇಟಿ ನೀಡಿ ವೈದ್ಯರಲ್ಲಿ ಸಮಾಲೋಚಿಸಿ ಈ ರೋಗಿಗೆ ಸೂಕ್ತ ಚಿಕಿತ್ಸೆ ನೀಡಿಸುವಲ್ಲಿ ಶ್ರೀ ಗುರುಚೈತನ್ಯದ ಹೊನ್ನಯ್ಯ ಕಾಟಿಪಳ್ಳ ಸಹಕರಿಸಿದರು.

 
 
 
 
 
 
 
 
 
 
 

Leave a Reply