ಸೈಕಲ್‌ಗೆ ಬಸ್ ಢಿಕ್ಕಿ; ಬಾಲಕ ಗಂಭೀರ

ಉಡುಪಿ: ಶಾಲೆ ಬಿಟ್ಟು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಬಸ್ ಢಿಕ್ಕಿಯಾಗಿ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಕಾಪು ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕಟಪಾಡಿ ಪೋಸಾರು ಜಂಕ್ಷನ್‌ನಲ್ಲಿ ಅಜಾಗ್ರತೆಯಿಂದ ಬಸ್ಸು ಚಲಾಯಿಸಿ ಬಂದು ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

 
 
 
 
 
 
 
 
 
 
 

Leave a Reply