ಸಂಸ್ಕೃತಿ ಸಂಭ್ರಮ-2024, ಪುತ್ತೂರು ಬ್ರಾಹ್ಮಣ ವಲಯಕ್ಕೆ ಸಮಗ್ರ ಪ್ರಶಸ್ತಿ.

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಂಸ್ಕೃತಿ ಸಂಭ್ರಮ-2024 ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಪುತ್ತೂರು ವಲಯ ತಂಡವು ಸಮಗ್ರ ಪ್ರಶಸ್ತಿ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿಯ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ ಎಂ ಹರಿಶ್ಚಂದ್ರರವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ ಯುವಪೀಳಿಗೆ ವಿಪ್ರ ಸಂಘಟನೆಗೆ ಶಕ್ತಿ ತುಂಬಬೇಕೆಂದರು.ಸಭಾ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ್ ಮುಳ್ಳೇರಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಶ್ರೀ ಪರ್ಯಾಯ ಪುತ್ತಿಗೆ ಮಠದ ದಿವಾನ ಎಂ ನಾಗರಾಜ್ ಆಚಾರ್ಯ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಮಂಜ,ಸಭಾದ ಕಾರ್ಯದರ್ಶಿ ಕೃಷ್ಣರಾಜ್ ಬಲ್ಲಾಳ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಡಾ ಪ್ರಕಾಶ ರಾವ್ ಸ್ವಾಗತಿಸಿದರು.ಸಭಾದ ಹಿರಿಯ ಸದಸ್ಯ ರಾಜಗೋಪಾಲ್ ಬಲ್ಲಾಳ್ ವಿಜೇತರ ಪಟ್ಟಿ ವಾಚಿಸಿದರು.ಸಭಾದ ಅಧ್ಯಕ್ಷ ವಿಶ್ವನಾಥ ಬಾಯರಿ ವಂದಿಸಿದರು. ಮಹಿಳಾ ಸಂಚಾಲಕಿ ಯರಾದ ವೀಣಾ ಬಾಯರಿ ಹಾಗೂ ಶಿಲ್ಪಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ತಾಲೂಕಿನ ಆಯ್ದ ಹತ್ತು ಬ್ರಾಹ್ಮಣ ವಲಯಗಳ 200 ಮಂದಿ ಸ್ಪರ್ಧಿಗಳು ಈ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ್ದರು.
 
ಫಲಿತಾಂಶ –
ಸಮೂಹ ಗೀತೆ : ಕೊರಂಗ್ರಪಾಡಿ  ಪಾವನ ಪರಿಷತ್ (ಪ್ರ)
ಚಿಟ್ಪಾಡಿ ಬ್ರಾಹ್ಮಣ ವಲಯ(ದ್ವಿ)
ಸಮೂಹ ನೃತ್ಯ: 
ಚಿಟ್ಪಾಡಿ ಬ್ರಾಹ್ಮಣ ವಲಯ(ಪ್ರ)
ಪುತ್ತೂರು ಬ್ರಾಹ್ಮಣ ವಲಯ (ದ್ವಿ)
 
ರಂಗೋಲಿ:
ಕರಂಬಳ್ಳಿ ಬ್ರಾಹ್ಮಣ ವಲಯ(ಪ್ರ)
ಕುಂಜೀಬೆಟ್ಟು ಬ್ರಾಹ್ಮಣ ವಲಯ(ದ್ವಿ)
ಆಶುಭಾಷಣ: 
ಪುತ್ತೂರು ಬ್ರಾಹ್ಮಣ ವಲಯ(ಪ್ರ)
ಕೊಡವೂರು ಬ್ರಾಹ್ಮಣ ವಲಯ(ದ್ವಿ)
ಛದ್ಮವೇಷ:
ಪುತ್ತೂರು ಬ್ರಾಹ್ಮಣ ವಲಯ (ಪ್ರ)
ಕಿನ್ನಿಮುಲ್ಕಿ ಬ್ರಾಹ್ಮಣ ವಲಯ(ದ್ವಿ)
 
 
 
 
 
 
 
 
 
 
 

Leave a Reply