Janardhan Kodavoor/ Team KaravaliXpress
29.6 C
Udupi
Saturday, July 2, 2022
Sathyanatha Stores Brahmavara

ಬಿಜೆಪಿ ಉಡುಪಿ ಗ್ರಾಮಾಂತರ – ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಸಂಸ್ಮರಣೆ

ಭಾರತೀಯ ಜನಸಂಘದ ಸಂಸ್ಥಾಪಕರಾದ ‘ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಬಲಿದಾನ ದಿವಸ’ ಕಾರ್ಯಕ್ರಮವು ಇಂದು ಬೆಳಿಗ್ಗೆ ಬ್ರಹ್ಮಾವರ ಬಿಜೆಪಿ ಕಛೇರಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಡಲದ ಅಧ್ಯಕ್ಷರಾದ ವೀಣಾ ವಿ. ನಾಯ್ಕ್ ಅವರು ಮುಖರ್ಜಿಯವರ ಜೀವನ ಚರಿತ್ರೆ ಬಗ್ಗೆ ತಿಳಿಸಿ, ಕಾರ್ಯಕರ್ತರು ಅವರ ಚಿಂತನೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು ಹಾಗೂ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್ ಅವರು ಪಕ್ಷ ಯಾಕೆ ವಿನೂತನ ಕಾರ್ಯಕ್ರಮ ಕಾರ್ಯಕರ್ತರಿಗೆ ನೀಡುತ್ತಾರೆ ಹಾಗೂ ಇದರಿಂದ ಪಕ್ಷ ಸಂಘಟನೆ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮವನ್ನು ಮಂಡಲದ ಪ್ರತಿ ಶಕ್ತಿಕೇಂದ್ರದಲ್ಲಿ ನಡೆಸಿ, ಪರಿಸರ ಸ್ವಚ್ಛತೆ, ಗಿಡ ನೆಡೆವುದು, ಹಾಗೂ ಇನ್ನಿತರ ಕಾರ್ಯಕ್ರಮವನ್ನು ಮುಖರ್ಜಿಯವರ ಜನ್ಮದಿನ ಜುಲೈ 6 ವರೆಗೆ ಆಚರಿಸಬೇಕೆಂದು ಮಂಡಲ ಅಧ್ಯಕ್ಷರು ಹೇಳಿದರು. ಮಂಡಲದ ವತಿಯಿಂದ ಪ್ರತಿ ಶಕ್ತಿಕೇಂದ್ರಕ್ಕೆ ಮುಖರ್ಜಿಯವರ ಭಾವಚಿತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಮಂಡಲದ ಉಪಾಧ್ಯಕ್ಷರಾದ ರಘುಪತಿ ಬ್ರಹ್ಮಾವರ, ಪ್ರಮುಖರಾದ ಬಿರ್ತಿ ರಾಜೇಶ್ ಶೆಟ್ಟಿ, ವಾರಂಬಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ದೇವಾನಂದ, ಉಪ್ಪೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ದರಣೇಶ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೊಳಂಬೆ, ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೀರಾ ಸದಾನಂದ ಪೂಜಾರಿ, ಉಪಾಧ್ಯಕ್ಷರಾದ ಲಕ್ಷ್ಮೀ, ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಪೂಜಾರಿ, ಉಪಾಧ್ಯಕ್ಷರಾದ ಶೋಭಾ ಪೂಜಾರಿ, ಪಂಚಾಯತ್ ಸದಸ್ಯರಾದ ರಾಘವೇಂದ್ರ ಕೊಳಂಬೆ, ಬೇಬಿ ರಮೇಶ್, ಹೇಮಾ ಅಶೋಕ್, ಉದಯ ಪೂಜಾರಿ, ಕೃಷ್ಣ, ಶ್ರೀನಿವಾಸ ನಾಯಕ್, ಆರೂರು ರತ್ನಾಕರ ಶೆಟ್ಟಿ, ಪ್ರಮೀಳಾ, ವಿದ್ಯಾ ಉಪ್ಪೂರು, ಪಕ್ಷದ ಕಾರ್ಯಕರ್ತರಾದ ಬಾಲಕೃಷ್ಣ, ರವಿ ಕೊಳಂಬೆ, ದಿನೇಶ್ ಕೊಳಂಬೆ, ರಮ್ಯಾ ಉಪ್ಪೂರು, ಮುಂತಾದವರೂ ಉಪಸ್ಥಿತರಿದ್ದರು. ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸಚಿನ್ ಪೂಜಾರಿ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!