ಕೋಟ- ನವ್ಯಕ್ತಿತ್ವ ವಿಕಸನಕ್ಕೆ ಯೋಗ ಪೂರಕ

ಕೋಟ: ಇಂದಿನ ಸಂಕೀರ್ಣ ಸಮಾಜದಲ್ಲಿನ ಒತ್ತಡಗಳ ನಿವಾರಣೆಗೆ ಯೋಗ ಚೇತೋಹಾರಿ. ವಿದ್ಯಾರ್ಥಿದೆಸೆಯಲ್ಲಿಯೇ ಯೋಗಾಭ್ಯಾಸವನ್ನು ಅಳವಡಿಸಿಕೊಂಡರೆ ಆತ್ಮವಿಶ್ವಾಸ, ಆತ್ಮಚೇತನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಯೋಗ ಪೂರಕ. ಏಕಾಗ್ರತೆ, ಮಾನಸಿಕ ಶುದ್ಧಿ, ಭಾವನಾತ್ಮಕ ನಿಯಂತ್ರಣ ಮೊದಲಾದವುಗಳ ನಿರ್ವಹಣೆಗೆ ಯೋಗಕಲಿಕೆ ಅಗತ್ಯ ಎಂದು ಪತಂಜಲಿ ಯೋಗ ಸಮಿತಿಯ ರಾಘವೇಂದ್ರ ಭಟ್ ನುಡಿದರು.

ಅವರು ವಿಶ್ವಯೋಗ ದಿನಾಚರಣೆಯ ಅಂಗವಾಗಿ ವಿವೇಕ ಬಾಲಕಿಯರ ಪ್ರೌಢಶಾಲೆ ಹಾಗೂ ಪತಂಜಲಿ ಯೋಗಸಮಿತಿ, ಉಡುಪಿ ಆಸರೆಯಲ್ಲಿ ನಡೆದ ಯೋಗೋತ್ಸವದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಗದೀಶ ನಾವುಡ ಯೋಗದ ಹೊಸ ಸಾಧ್ಯತೆಗಳನ್ನು ವಿವರಿಸಿದರು. ವೇದಿಕೆಯಲ್ಲಿ ಪತಂಜಲಿ ಯೋಗಸಮಿತಿಯ ರವೀಂದ್ರ ನಾಯಕ್, ವಿದ್ಯಾರ್ಥಿನಿಯರಾದ ನುಸೈಬಾ ಮತ್ತು ನವಮಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳರು ಸ್ವಾಗತಿಸಿದರು. ವಿದ್ಯಾರ್ಥಿನಿ ತ್ರಿಶಾ ಕಾರ್ಯಕ್ರಮವನ್ನು ಸ್ವಾಗತಿಸಿದರೆ, ಅನನ್ಯ ವಂದಿಸಿದರು.

 
 
 
 
 
 
 
 
 
 
 

Leave a Reply