ಮಂಗಳೂರು ಪರ್ಸಿನ್ ಮೀನುಗಾರರ ಸಂಘದಿಂದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ದೇಣಿಗೆ


ಸುಮಾರು 32 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೇವಸ್ಥಾನಕ್ಕೆ
ಮಂಗಳೂರು ಪರ್ಸಿನ್ ಮೀನುಗಾರರ ಸಂಘ ದಿಂದ ಈ ಸಾಲಿನ ದೇಣಿಗೆಯಾಗಿ ರೂಪಾಯಿ 15ಲಕ್ಷ ನೀಡಲಾಯಿತು . ಈ ಸಂದರ್ಭದಲ್ಲಿ ಪರ್ಸಿನ್ ಮೀನುಗಾರರ ಸಂಘ ದ ಅಧ್ಯಕ್ಷರಾದ ಮೋಹನ್ ಪುತ್ರನ್ ಬೆಂಗ್ರೆ, ಉಮೇಶ್ ಕರ್ಕೇರ, ಬಾಲು ಶಶಿ ಮೆಂಡನ್ ಮತ್ತು ಇತರ ಪದಾಧಿಕಾರಿಗಳು, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ವಾಸುದೇವ ಸಾಲಿಯಾನ್ ಉಪಸ್ಥಿತರಿದ್ದರು

ಸಮಸ್ತ ಮೊಗವೀರರರ ಕುಲದೇವರಾದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರದ ಕಾಮಗಾರಿಯು ದ ಕ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ನಾಡೋಜ ಡಾ ಜಿ ಶಂಕರ್ ರವರ ಮಾರ್ಗದರ್ಶನದಲ್ಲಿ ಬರದಿಂದ ಸಾಗುತ್ತಿದ್ದು ಈಗಾಗಲೇ ಕಲ್ಲು ಮತ್ತು ಮರದ ಕೆತ್ತನೆಯ ಕಾಮಗಾರಿಗಳು ಸಾಗುತ್ತಿದೆ.

ಈ ಸಂದರ್ಭದಲ್ಲಿ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಮಾತನಾಡಿ ಮಂಗಳೂರು ಪರ್ಸಿನ್ ಮೀನುಗಾರರ ಸಂಘ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಅಪಾರವಾದ ಕೊಡುಗೆಯನ್ನು ನೀಡಿದೆ, ಎಲ್ಲಾ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಯಾವೊಂದು ವಿಘ್ನ ಎದುರಾಗದೆ ಮುಂದಿನ ದಿನಗಳಲ್ಲಿ ಹೇರಳವಾದ ಮತ್ಸ್ಯ ಸಂಪತ್ತು ಮೀನುಗಾರರಿಗೆ ಸಿಗುವಂತಾಗಲಿ ಎಂದು ತಾಯಿ ಮಹಾಲಕ್ಷ್ಮಿಯಲ್ಲಿ ಪ್ರಾರ್ಥಿಸಿದರು.

 
 
 
 
 
 
 
 
 
 
 

Leave a Reply