ಉಡುಪಿ: 330 ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 188 ಮಂದಿಗೆ ಸೋಂಕು ದೃಢಪಟ್ಟಿದ್ದು, 330 ಮಂದಿ ಗುಣಮುಖರಾಗಿದ್ದಾರೆ. ಉಡುಪಿಯ ಇಬ್ಬರು ಹಾಗೂ ಕುಂದಾಪುರದ ಒಬ್ಬರು ಸೇರಿದಂತೆ ಒಟ್ಟು 3 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ 2,167 ಸಕ್ರಿಯ ಪ್ರಕರಣಗಳಿವೆ.

ಇಂದು 3,473 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.ಆ ಪೈಕಿ 174 ಮಂದಿ ಮನೆ ಆರೈಕೆ ಹಾಗೂ 14 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸೋಂಕಿತರ ಪೈಕಿ ಉಡುಪಿಯ 90, ಕುಂದಾಪುರ 47, ಕಾರ್ಕಳ 47 ಮತ್ತು ಹೊರಜಿಲ್ಲೆಗಳ 4 ಮಂದಿ ಸೇರಿದ್ದಾರೆ.

ಮೃತರು ಉಡುಪಿಯ 70 ಮತ್ತು 71ರ ಹರೆಯದ ಮಹಿಳೆಯರು ಹಾಗೂ ಕುಂದಾಪುರದ 73ರ ಹರೆಯದ ಪುರುಷ ಎಂದು ಡಿಎಚ್.ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply