“ಶಾಲೆಗಳಲ್ಲಿ ಆಪ್ತಸಮಾಲೋಚನೆ ಇಂದಿನ ಅಗತ್ಯ” ~ಡಾ ಮಹಾಬಲೇಶ್ವರ ರಾವ್

“ಇಂದು ನಮ್ಮ ತರಗತಿಗಳಲ್ಲಿ ಕಂಡುಬರುವ ವಿದ್ಯಾರ್ಥಿಗಳು ವಿವಿಧ ಕೌಟುಂಬಿಕ,ಸಾಮಾಜಿಕ ಸಾಂಸ್ಕೃತಿಕ ಹಾಗೂ ಆರ್ಥಿಕ ಹಿನ್ನೆಲೆಗಳಿಂದ ಬಂದವರು. ಅವರು ಹೊತ್ತು ತರುವ ಮಾನಸಿಕ,ಭಾವನಾತ್ಮಕ ಸಮಸ್ಯೆಗಳು ವೈವಿಧ್ಯಮಯ. ವಿದ್ಯಾರ್ಥಿಗಳ ಕಲಿಕೆಯ ಹಿನ್ನಡೆಗೆ ಅವರ ತಂದೆತಾಯಿ,ಮನೆಯ ಭಾವನಾತ್ಮಕ ಪರಿಸರ ಕಾರಣ.ಆದುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಲ್ಲಿ ಆಪ್ತ ಸಮಾಲೋಚಕರು ಇರಬೇಕಾದುದು ಅತಿ ಅಗತ್ಯ.ಅಂತೆಯೇ ಉದ್ಯೋಗ ಮಾರ್ಗದರ್ಶನ ನೀಡುವುದೂ ಆವಶ್ಯಕ” ಎಂದು ಡಾ ಮಹಾಬಲೇಶ್ವರ ರಾವ್ ನುಡಿದರು.ಅವರು ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನ ವಿಭಾಗದ ವಿದ್ಯಾರ್ಥಿ- ಶಿಕ್ಷಕರು ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ವಿದ್ಯಾರ್ಥಿ ಶಿಕ್ಷಕರು ಸ್ವರಚಿತ ಕವನ ವಾಚನ, ಪ್ರಬಂಧಮಂಡನೆ, ಮೂಕಾಭಿನಯ,ಸಮೂಹ ನೃತ್ಯ, ಜಾಹಿರಾತು ಹಾಗೂ ವೃತ್ತಿ ಮಾರ್ಗದರ್ಶನ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನೀಲಮ್ಮ. ಎಸ್ ಸ್ವಾಗತ ಕೋರಿದರು. ಕೆ.ವಿಜಯಲಕ್ಷ್ಮೀ ಆಭಾರ ಮನ್ನಿಸಿದರು. ಸ್ವಾತಿ ಮತ್ತು ಅಕ್ಷತ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply