ಟಿ.ಎ.ಪೈ ಪ್ರೌಢಶಾಲೆ: ಕಾನೂನು ಅರಿವು ಕಾರ್ಯಕ್ರಮ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಮತ್ತು ಜಿಲ್ಲಾ ವಕೀಲರ ಸಂಘ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕುಂಜಿಬೆಟ್ಟಿನ ಟಿ.ಎ.ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿನಲ್ಲಿ ಇತ್ತೀಚೆಗೆ ಕಾನೂನು ಅರಿವು ಕಾರ್ಯಕ್ರಮ ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ನ್ಯಾಯವಾದಿ ಶ್ರೀಮತಿ.ಶರ್ಮಿಳಾ ಅವರು ಮಾತನಾಡುತ್ತಾ ಭಾರತದ ಸಂವಿಧಾನವು ಕೊಡ ಮಾಡಿದ ಮಕ್ಕಳ ಹಕ್ಕುಗಳ ಬಗ್ಗೆ ವಿವರಣೆ ನೀಡಿದರು. ಬಾಲವಿವಾಹ ನಿಷೇಧ ಕಾಯಿದೆ, ಬಾಲ ಕಾರ್ಮಿಕ ಕಾಯಿದೆ ಶಿಶು ಭ್ರೂಣಹತ್ಯೆ ಕಾಯಿದೆ, ಪೋಕ್ಸೋಕಾಯಿದೆ ಮೊದಲಾದವುಗಳ ಬಗ್ಗೆ ವಿವರಣೆ ನೀಡಿ
ಮಕ್ಕಳು ಕಾನೂನುಗಳನ್ನು ಅರಿತು ಒಳ್ಲೆಯ ರೀತಿಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ಇತ್ತರು.

ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀ ಸಂಭ್ರಮ್, ಶ್ರೀ ಉದಂiÀi ಪ್ರಸಾದ್ ಕು.ಅಪರ್ಣಾ ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋದಾ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ರೂಪಶ್ರೀ
ವಂದನಾರ್ಪಣೆಗೈದರು. ಶಿಕ್ಷಕಿ ಶ್ರೀಮತಿ ಮೃದುಲಾ ಕಾರ್ಯಕ್ರಮ ಸಂಯೋಜಿಸಿದರು.

 
 
 
 
 
 
 
 
 
 
 

Leave a Reply