ಟಿ .ಎ .ಪೈ ಪ್ರೌಢಶಾಲೆ  ಮೌಲ್ಯಾಧಾರಿತ ಶಿಕ್ಷಣ – ವಿಶೇಷ ಉಪನ್ಯಾಸ

ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ , ಇಂಟರ್ಯಕ್ಟ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ
ಕುಂಜಿಬೆಟ್ಟಿನ ಟಿ ಎ ಪೈ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ನಲ್ಲಿ ಇತ್ತೀಚೆಗೆ
ಮೌಲ್ಯಾಧಾರಿತ ಶಿಕ್ಷಣ – ವಿಶೇಷ ಉಪನ್ಯಾಸವು ಜರಗಿತು. ಕಾರ್ಯಕ್ರಮದ ಮುಖ್ಯ
ಅತಿಥಿಗಳಾಗಿ ಆಗಮಿಸಿದ ರೋ. ಡಾ. ಮನೋಜ್ ಕುಮಾರ್ ನಾಗಸಂಪಿಗೆ ಅವರು
ಮಾತನಾಡುತ್ತಾ ಇಂದಿನ ಮಕ್ಕಳು ಭವಿಷ್ಯದಲ್ಲಿ ಸುಸಂಸ್ಕೃತ ನಾಗರಿಕರಾಗಿ ಬೆಳೆಯಲು ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿರುವುದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಂತಹ
ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ ಎಂದರು.

ರೋ. ವಿಠಲ್ ದಾಸ್ ಭಟ್ ಮೌಲ್ಯಾಧಾರಿತ ಶಿಕ್ಷಣ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿ
ವಾಚಿಸಿದರು. ರೋ. ರಮಾನಂದ ಭಟ್ ಸ್ವಾಗತಿಸಿ ಪ್ರಶಸ್ತಿ ಪತ್ರ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋದ ಶೆಟ್ಟಿ ಯವರು ಪ್ರಸ್ತಾವನೆಗೈದು
ವ್ಯಕ್ತಿತ್ವ ವಿಕಾಸನಕ್ಕೆ ಮೌಲ್ಯಾಧಾರಿತ ಶಿಕ್ಷಣ ಅವಶ್ಯ ಎಂದರು.

ರೋ. ಮಾಲತಿ ರಾವ್, ರೋ. ವಿಠಲ್ ದಾಸ್ ಭಟ್, ರೋ.ಎಂ ನಾರಾಯಣ ಭಟ್, ಪ್ರಬಂಧದ ತೀರ್ಪುಗಾರರಾಗಿ ಸಹಕರಿಸಿದ್ಧರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋ .ಸುಪರ್ಣಾ ಶೆಟ್ಟಿ ಯವರು ಮೌಲ್ಯಾಧಾರಿತ ಶಿಕ್ಷಣದ ಮಹತ್ವ ಬಗ್ಗೆ ಮಾತನಾಡಿದರು.

ರೋ. ತಾರಾ ಶೆಟ್ಟಿ  , ರೋ.ಸುಂದರ್ ಶೆಟ್ಟಿ, ರೋ. ಭಾಸ್ಕರ್ ರಾವ್, ರೋ. ಪಿ. ಆರ್
ನಾಯಕ್. ಇಂಟರ್ಯಕ್ಟ್ ಕ್ಲಬ್ ನ ಸಂಯೋಜಕ ಶ್ರೀ ಯೋಗೀಶ್ ಮೊದಲಾದವರು
ಉಪಸ್ಥಿತರಿದ್ದರು. ಮಾ. ಪ್ರೀತಮ್ ದಾಸ್ ಅತಿಥಿಗಳನ್ನು ಪರಿಚಯಿಸಿದರು. ಇಂಟರ್ಯಕ್ಟ್ ಕ್ಲಬ್ ನ ಕಾರ್ಯದರ್ಶಿ ಮಾ. ಸೃಜನ್ ಎಸ್ ಆಚಾರ್ಯ ವಂದನಾರ್ಪಣೆಗೈದರು. ಇಂಟರ್ಯಕ್ಟ್ ಕ್ಲಬ್ ನ ಅಧ್ಯಕ್ಷ ಮಾ.ಧೀರಜ್ ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 

Leave a Reply