ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಗದ್ದೆ-ನಾಟಿ ಕೃಷಿ ಕಾಯ೯ಕ್ರಮ

ಶಿವ೯: ಅನಾದಿ ಕಾಲದಿಂದಲೂ ಕೃಷಿ ಮಾನವನ ಕುಲ ಕಸುಬು.
ಆಧುನಿಕತೆ ಬೆಳೆದಂತೆ ಮನುಷ್ಯ ಬೇರೆ ಬೇರೆ ಕೆಲಸಕಾಯ೯ಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರಣ ಇಂದು ಕೃಷಿಯು ಹಿಂದುಳಿಯುದಕ್ಕೆ ಕಾರಣವಾಯಿತು.

ಆದರೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕಾಯ೯ ಇಂದು ಸಾಗುತ್ತಿದೆ ಈ ನಿಟ್ಟಿನಲ್ಲಿ ಯುವಜನತೆಯು ಭಾಗಿಯಾಗುವ ಮೂಲಕ ನೆಲ-ಜಲ ಭೂಮಿಯ ಸಂರಕ್ಷಣೆ ಭೂಮಿಯನ್ನು ಹಸಿರಾಗಿಸುವುದರ ಮೂಲಕ ಮಾಡಿದರೆ ಮುಂದಿನ ಜನಾಂಗಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಸಂತ ಮೇರಿ ಮಹಾವಿದ್ಯಾಲಯದ ಗ್ರೀನ್ ಟೀಚರ್ ಪೋರಂನ ಸಹಭಾಗಿತ್ವದಲ್ಲಿ ಎನ್ಎಸ್ಎಸ್, ಎನ್ ಸಿಸಿ, ರೋವರ್ಸ್ & ರೇಂಜರ್ಸ್, ರೆಡ್ ಕ್ರಾಸ್, ರೋಟರಿ ಶಿವ೯ ಇವರ ಸಂಯುಕ್ತ ಆಶ್ರಯದಲ್ಲಿ ಕುಂಜಿಗುಡ್ಡೆ ಪಿಲಾರ್ ಶ್ರೀಫೆಡ್ರಿಕ್ ಕ್ಯಾಸ್ತಲಿನೊ ಮತ್ತು ಶ್ರೀಮತಿ ಹೆಲೆನ ಕ್ಯಾಸ್ತಲಿನೊ ಇವರ ಗದ್ದೆಯಲ್ಲಿ ನೇಜಿ ನಾಟಿ ಕೃಷಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯ ಪ್ರಶಸ್ತಿ ವಿಜೇತ ರೋಟರಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀರಾಘವೇಂದ್ರ ನಾಯಕ್ ಮಾತನಾಡಿದರು.

ನಾವು ಸಮಾಜ ಮುಖಿಯಾಗಿ ಬೆಳೆಯಬೇಕು,ವಿದ್ಯಾರ್ಥಿಗಳು ಸಮಾಜ ಮತ್ತು ಕಾಲೇಜನ್ನು ಬೆಸೆಯುವ ಕೊಂಡಿಗಳು.ಆದುದರಿಂದ ಸಾಮಾಜಿಕ ಕೊಡುಕೊಳ್ಳುವಿಕೆಯು ಆರೋಗ್ಯ ಪೂಣ೯ ಪರಿಸರ ನಿಮಿ೯ಸಲು ಸಹಕಾರಿ ಯಾಗುತ್ತದೆ.ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾಜ ಸೇವೆಯು ನಿರಂತರವಾದಾಗ ಒಂದು ಉತ್ತಮ ಸಮಾಜದ ಸಹಭಾಗಿತ್ವಕ್ಕೆ ಕಾರಣವಾಗುತ್ತದೆ..

ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಯಶಸ್ವಿಗೊಳ್ಳ ಲು ನಮ್ಮ ಹಳೆವಿದ್ಯಾಥಿ೯ ಶ್ರೀಜಾಕ್ಸನ್ ಹಾಗೂ ಇತರರ ಸಹಕಾರ ಶ್ಲಾಘನೀಯ ಎಂದು ಪ್ರಶಂಸನೀಯ ಮಾತು ಗಳನ್ನಾಡಿದ ಕಾರ್ಯಕ್ರಮದ ಅಧ್ಯಕ್ಷರೂ ಆದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆರಾಲ್ಡ್‌ ಐವನ್ ಮೊನಿಸ್ ರವರು ನುಡಿದ ವಂದಿಸಿದರು ನುಡಿದು ವಂದಿಸಿದರು.

ನಮ್ಮ ಈ ಕಾರ್ಯಕ್ರಮದ ಉದ್ದೇಶ ಮುಂದಿನ ಪೀಳಿಗೆ ನಮ್ಮ ಮಣ್ಣಿನ ಸಂಬಂಧವನ್ನು ಉಳಿಸಿಕೊಳ್ಳುವುದರ ಜೊತೆಗೆ ಕೃಷಿ ಕಾಯ೯ಗಳಲ್ಲಿ ಭಾಗಯಾಗಿ ಸಮಾಜ ಸೇವೆ ಮಾಡುವುದು,ಕೃಷಿ ಸಂಬಂಧಿ ಕಲಿಕೆಯೂ ಆಗಿದೆ ಎಂದು ಕಾರ್ಯಕ್ರಮಕ್ಕೆ ಬಂದ ಎಲ್ಲ ರನ್ನು ಸ್ವಾಗತಿಸಿ ಗ್ರೀನ್ ಟೀಚರ್ ಪೋರಂನ ಸಂಯೋಜಕಿ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿದೇ೯ಶಕಿಯೂ ಆದ ಕು.ಯಶೋದ ಪ್ರಸ್ತಾವಿಕ ಮಾತುಗಳಲ್ಲಿ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಶಿವ೯ದ ಕಾರ್ಯದರ್ಶಿ ರೋಟರಿ ಶ್ರೀಜಿನೇಶ್ ಬಳ್ಳಾ ಲ್,ಪತ್ರಕರ್ತ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಕಾಪು ವಲಯ ಅಧ್ಯಕ್ಷರಾದ ರೋಟರಿ ಶ್ರೀಪುಂಡಲೀಕ ಮರಾಠೆ, ಕಾಲೇಜಿನ ಎನ್ ಸಿ ಸಿ ಘಟಕದ ಅಧಿಕಾರಿ ಲೆಪ್ಟಿನೆಂಟ್ ಶ್ರೀ ಕೆ.ಪ್ರವಿಣ್ ಕುಮಾರ್, ಎನ್ ಎಸ್ ಎಸ್ ಘಟಕದ ಸಂಯೋಜಕ ಶ್ರೀಪ್ರೇಮನಾಥ್, ರೇಂಜರ್ಸ &ರೋವರ್ಸ ಘಟಕದ ಶ್ರೀಪ್ರಕಾಶ್ , ಶ್ರೀಮತಿ ಸಂಗೀತಾ, ರೆಡ್ ಕ್ರಾಸ್ ಘಟಕ ದ ಶ್ರೀಮುರಳಿ ,ಅಧ್ಯಾಪಕ ಸಂಘದ ಕಾಯ೯ದಶಿ೯ ಶ್ರೀಮತಿ ರೀಮಾ ಲೋಬೊ, ಹಿರಿಯ ಉಪನ್ಯಾಸಕರಾದ ಶ್ರೀವಿಠಲ್ ನಾಯಕ್ ಹಾಗೂ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು.

ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರು ಮತ್ತು ವಿದ್ಯಾರ್ಥಿಗಳು ವಿಶೇಷವಾಗಿ ಹಳೆವಿದ್ಯಾಥಿ೯ಗಳು ಭಾಗವಹಿಸಿ ಕಾರ್ಯಕ್ರಮ ವನ್ನು ಚಂದಕಾಣಿಸಿ ಯಶಸ್ವಿ ಗೊಳಿಸಿ ಸಹಕರಿಸಿದರು.ಬಂದ ಅತಿಥಿಗಳು ಮತ್ತು ನಾಟಿ ಕಾಯ೯ಕ್ಕೆ ಗದ್ದೆಯನ್ನು ಒದಗಿಸಿ ವ್ಯವಸ್ಥೆಗೊಳಿಸಿ ಪೂರ್ಣ ಸಹಕಾರ ಕೊಟ್ಟ ಶ್ರೀಫೆಡ್ರಿಕ್ ಕ್ಯಾಸ್ತಲಿನೊ ಇವರಿಗೆ ಕಾಲೇಜಿನ ಪ್ರಾಂಶುಪಾಲರು ಫಲಬಿಡುವ ಸಸಿಗಳನ್ನು ನೆನಪಿನ ಕಾಣಿಕೆಯಾಗಿ ನೀಡಿ ಅವರಿಗೆ ಕ್ರತಜ್ಞತೆಯನ್ನು ಸಲ್ಲಿಸಿದರು.

 
 
 
 
 
 
 
 
 
 
 

Leave a Reply