ತೆಂಕನಿಡಿಯೂರು ಕಾಲೇಜು : ಪ್ರೊ. ವಿನೀತಾ ತಂತ್ರಿ ಇವರಿಗೆ ಬೀಳ್ಕೊಡುಗೆ ಸಮಾರಂಭ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ೨೫ ವರ್ಷಗಳ ಸುಧೀರ್ಘ ಕಾಲ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರಾಗಿದ್ದ ಪ್ರೊ. ವಿನೀತಾ ತಂತ್ರಿ ಇವರು  ಜ.30ರಂದು ವಯೋ ನಿವೃತ್ತಿ ಹೊಂದಿದ್ದು, ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಶಿಕ್ಷಕ ವೃತ್ತಿ ಅಜ್ಞಾನದಿಂದ ಜ್ಞಾನದೆಡೆಗೆ ಸಾಗಿಸುವ ಪವಿತ್ರ ವೃತ್ತಿಯಾಗಿದ್ದು, ಈ ಸೇವೆ ಸಿಗುವುದು ಕಠಿಣ ಪರಿಶ್ರಮಿಗಳಿಗೆ, ಜೀವನೋತ್ಸಾಹಿಗಳಿಗೆ, ಪರಿವರ್ತನೆಯ ಹರಿಕಾರರಿಗೆ. ಈ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ನಿರ್ವಹಿಸಬೇಕು. ಪ್ರೊ. ವಿನೀತಾ ತಂತ್ರಿಯವರು ಈ ವೃತ್ತಿಗೆ ನ್ಯಾಯ ಒದಗಿಸಿದ್ದಾರೆ ಅವರ ನಿವೃತ್ತಿಯ ಬದುಕು ಸುಖಮಯವಾಗಿರಲಿ” ಎಂದು ಶುಭ ಹಾರೈಸಿದರು.

ಐ.ಕ್ಯೂ.ಎ.ಸಿ. ಸಂಚಾಲಕ  ಡಾ. ಸುರೇಶ್ ರೈ ಕೆ., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಹಾಗೂ ಅಧ್ಯಾಪಕರ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ್ ಯು. ಉಪಸ್ಥಿತರಿದ್ದರು. ಪ್ರಾಧ್ಯಾಪಕಿ  ಸುಜಾತ ವಿ. ಶೇಟ್ ಹಾಗೂ  ಮೇವಿ ಮಿರಾಂದ ಪ್ರಾರ್ಥಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ  ರತ್ನಮಾಲಾ ಸ್ವಾಗತಿಸಿದರು. ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಶ್ರೀಮತಿ ಸುಜಾತಾ ವಿ. ಶೇಟ್ ವಂದಿಸಿ, ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕಿ  ಶರ್ಮಿಳಾ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ/ಬೋಧಕೇತರರು ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply