ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಒಂದು ವಾರ ಅವಧಿಯ DST – STUTI ತರಬೇತಿ ಕಾರ್ಯಕ್ರಮ

ಮಣಿಪಾಲ: ವೈಜ್ಞಾನಿಕ ಮತ್ತು ತಾಂತ್ರಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಸಿನರ್ಜಿಸ್ಟಿಕ್ ತರಬೇತಿ ಕಾರ್ಯಕ್ರಮದ (STUTI) ಅಡಿಯಲ್ಲಿ ವಸ್ತು ಗುಣಲಕ್ಷಣಗಳ ತಂತ್ರಗಳ ಕುರಿತು ಒಂದು ವಾರದ ಅವಧಿಯ ತರಬೇತಿ ಕಾರ್ಯಕ್ರಮವು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯಲ್ಲಿ ಗುರುವಾರ 5 ನೇ ಜನವರಿ 2023 ರಿಂದ
ಪ್ರಾರಂಭವಾಗುತ್ತಲಿದೆ. ಮಹಾರಾಷ್ಟ್ರದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಜಂಟಿ ಸಹಯೋಗದೊಂದಿಗೆ ಮಣಿಪಾಲದ ಎಂಐಟಿಯ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗಗಳು‌ ಈ ತರಬೇತಿ ಕಾರ್ಯಕ್ರಮವನ್ನು
ಆಯೋಜಿಸುತ್ತಿವೆ. ಈ ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST), ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ ಪ್ರಾಯೋಜಿಸಿದೆ. STUTI ಯೋಜನೆಯು ದೇಶದ ವಿವಿಧ ಸಂಸ್ಥೆಗಳಲ್ಲಿ
ಸಕ್ರಿಯವಾಗಿ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು/ ಪ್ರೊಫೆಸರ್‌ಗಳು /ಪಿಎಚ್ಡಿ ಮತ್ತು ಪಿಡಿಎಫ್‌ ಸಂಶೋಧನಾರ್ಥಿಗಳಿಗೆ ವಿವಿಧ ಆಧುನಿಕ ವೈಜ್ಞಾನಿಕ ಉಪಕರಣಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ
ಮೂಲಕ ದೇಶಾದ್ಯಂತ ಮೂಲಸೌಕರ್ಯಕ್ಕೆ ಮುಕ್ತ ಪ್ರವೇಶದ ಮೂಲಕ ಮಾನವ ಸಂಪನ್ಮೂಲ ಮತ್ತು ಅದರ ಸಾಮರ್ಥ್ಯವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ.

ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಸರ್. ಎಮ್. ವಿ. ಸೆಮಿನಾರ್ ಹಾಲ್, MIT, ಮಣಿಪಾಲದಲ್ಲಿ 5 ನೇ ಜನವರಿ 2023 ರಂದು ನಡೆಯಲಿದೆ. ಅಧ್ಯಕ್ಷರಾಗಿ Cdr. (ಡಾ.) ಅನಿಲ್ ರಾಣಾ, ನಿರ್ದೇಶಕರು, ಎಂಐಟಿ, ಮಣಿಪಾಲ, ಗೌರವ
ಅತಿಥಿಗಳಾಗಿ ಪ್ರೊ. ಆರ್. ಜಿ. ಸೋಂಕವಾಡೆ, ಪಿಎಂಯು ಸಂಯೋಜಕರು, STUTI ಕಾರ್ಯಕ್ರಮ, ಶಿವಾಜಿ ವಿಶ್ವವಿದ್ಯಾಲಯ, ಕೊಲ್ಲಾಪುರ, ಮಹಾರಾಷ್ಟ್ರ ಮತ್ತು ಮುಖ್ಯ ಅತಿಥಿಗಳಾಗಿ ಡಾ. ವಿನೋದ್ ವಿ. ಥಾಮಸ್, ರಿಜಿಸ್ಟ್ರಾರ್
ಮೌಲ್ಯಮಾಪನ, ಮಾಹೆ, ಮಣಿಪಾಲ ಇವರು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಈ ರಾಷ್ಟ್ರೀಯ ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಅಸ್ಸಾಂ ಮತ್ತು ತಮಿಳುನಾಡಿನಿಂದ ಸಂಶೋಧನೆಯಲ್ಲಿ ತೊಡಗಿರುವ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ. ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಹದಿನಾಲ್ಕು ಸಮಗ್ರ ಉಪನ್ಯಾಸಗಳನ್ನು ನೀಡಲಾಗುವುದು ಮತ್ತು ಭಾಗವಹಿಸುವವರಿಗೆ ವಿವಿಧ
ಸಂಶೋಧನಾ ಸಾಧನಗಳ ಕುರಿತು ತರಬೇತಿಯನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮವನ್ನು ಪ್ರೊ. ಕೆ ಮೋಹನ್ ರಾವ್, ಪ್ರೊ. ಸುಮಾ ಎ ರಾವ್ ಸಂಚಾಲಕರಾಗಿ ಹಾಗು ಡಾ. ಇಸ್ಮಾಯಿಲ್, ಡಾ. ಗುರುಮೂರ್ತಿ ಎಸ್. ಸಿ ಮತ್ತು ಡಾ. ಸುಧಾಕರ್
ವೈ. ಎನ್ ಸಂಯೋಜಿಸಲಿದ್ದಾರೆ.

 
 
 
 
 
 
 
 
 
 
 

Leave a Reply