ಕೋಟ ಅಮೃತೇಶ್ವರಿ ಜಾತ್ರೆ- ಪ್ಲಾಸ್ಟಿಕ್ ಮುಕ್ತ ಜಾತ್ರೆಯಾಗಿಸಲು ಆನಂದ್ ಸಿ ಕುಂದರ್ ಕರೆ

ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಕೋಟ ,ಕೋಟ ಗ್ರಾಮಪಂಚಾಯತ್, ಗೀತಾನಂದ ಫೌಂಡೇಶನ್ ನೇತ್ರತ್ವದಲ್ಲಿ  ಲಕ್ಷ್ಮೀಸೋಮಬಂಗೇರ ಸ.ಪ್ರ ಕಾಲೇಜಿನ ಎನ್ ಎಸ್ ಎಸ್ ಘಟಕ,ಕೋಟ ಗ್ರಾ.ಪಂ ಎಸ್ ಎಲ್ ಎಂ ಆರ್ ಘಟಕ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ,ಹಂದಟ್ಟು ಮಹಿಳಾ ಬಳಗ,ಮಣೂರು ಫ್ರೆಂಡ್ಸ್, ಯಕ್ಷಸೌರಭಕಲಾರಂಗ ಕೋಟ ಇವರುಗಳ ಸಹಯೋಗದೊಂದಿಗೆ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಜ.9ರಿಂದ11ರ ತನಕ ನಡೆಯುವ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಮುಕ್ತ ಜಾತ್ರೆ ಹಮ್ಮಿಕೊಂಡಿದೆ.ಈ ದಿಸೆಯಲ್ಲಿ  ಮಂಗಳವಾರ ಕೋಟ ಅಮೃತೇಶ್ವರಿ ದೇವಳದಲ್ಲಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಕಾರ್ಯಕ್ರಮದ ರೂಪುರೇಖೆಯ ಬಗ್ಗೆ  ಪಂಚವರ್ಣದ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿದರು.
ಪ್ಲಾಸ್ಟಿಕ್ ಮುಕ್ತ ಜಾತ್ರೆ 
2019 ರಲ್ಲಿ ಕೋಟ ಅಮೃತೇಶ್ವರಿ ಜಾತ್ರೆ ಶೇಕಡಾ 80ರಷ್ಟು ಪ್ಲಾಸ್ಟಿಕ್ ಮುಕ್ತ ಜಾತ್ರೆ ಯಶಸ್ವಿಗೊಂಡಿದ್ದು ಈ ಹಿನ್ನಲೆಯಲ್ಲಿ ಮತ್ತೆ ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ನ ಕುರಿತು ಅರಿವು ಮೂಡಿಸಬೇಕು,ಈ ದಿಸೆಯಲ್ಲಿ ಜಾತ್ರೆಗೆ ಬರುವ ಪ್ರತಿಯೊರ್ವ ಭಕ್ತರು ಬಟ್ಟೆ ಚೀಲ ಹಿಡಿದು ದೇವಳಕ್ಕೆ ಆಗಮಿಸಬೇಕು,ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಸ್ಥಳೀಯ ಅಂಗಡಿ ಮುಂಗಟ್ಟುಗಳಿಗೆ ಇದರ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಾರೆ,ಪ್ಲಾಸ್ಟಿಕ್ ಮಾರಾಟ ಕಂಡುಬಂದರೆ ಅಂತವರಿಗೆ ದಂಡ ವಿಧಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಾಥ,ಸ್ಟಾಲ್ ರಚನೆ
ಪ್ಲಾಸ್ಟಿಕ್ ಮುಕ್ತ ಜಾತ್ರೆಯ ಸ್ಟಾಲ್ ರಚನೆ,ಪೂರ್ವಾಹ್ನ ಜಿಲ್ಲಾಡಳಿತದ ಪ್ರತಿನಿಧಿಗಳ ಮೂಲಕ ಉದ್ಘಾಟನೆ,ಲ.ಸೋ ಬಂಗೇರ ಸ.ಪ್ರ.ಕಾಲೇಜಿನ ಎಸ್ ಎಸ್ ಎಸ್ ವಿದ್ಯಾರ್ಥಿಗಳು ಹಾಗೂ ಕೋಟ ಗ್ರಾಮಪಂಚಾಯತ್ ಎಸ್ ಎಲ್ ಆರ್ ಎಂ ಘಟಕದ ಪ್ರತಿನಿಧಿಗಳು,ಸಂಘಸಂಸ್ಥೆಗಳ ಮೂಲಕ ಜಾಗೃತಿ ಜಾಥ ,ಬಿತ್ತಿ ಪತ್ರ ಅನಾವರಣ,ಮನೆ ಮನೆಗೆ ಈ ಕುರಿತು ಮಾಹಿತಿ ಹೀಗೆ ಸಾಕಷ್ಟು ಕಾರ್ಯಕ್ರಮಗಳು ಈ ಯೋಜನೆಯಲ್ಲಿ ನಡೆಯಲಿದೆ. 
ಕಾರ್ಯಕ್ರಮದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಎಂ.ಸುಬ್ರಾಯ ಆಚಾರ್ಯ, ಕೋಟ ಎಸ್ ಎಲ್ ಎಂ ಆರ್ ಘಟಕದ ಮುಖ್ಯಸ್ಥೆ ಲೋಲಾಕ್ಷಿ ಕೋತ್ವಾಲ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ್,ಕೋಟ ಸಿ ಎ ಬ್ಯಾಂಕ್ ಉಪಾಧ್ಯಕ್ಷ ರಾಜೀವ ದೇವಾಡಿಗ,ಗೀತಾನಂದ ಫೌಂಡೇಶನ್ ಮಣೂರು ಇದರ ಸಮಾಜಕಾರ್ಯವಿಭಾಗದ ರವಿಕಿರಣ್ ಕೋಟ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ವಂದಿಸಿದರು.
 
 
 
 
 
 
 
 
 
 
 

Leave a Reply