ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಅವಶ್ಯಕ~ ಡಾ. ಅನ್ನಪೂಣ೯ ಕೆ.

ಉಡುಪಿ: ಅಧುನಿಕ ಜೀವನ ಶೈಲಿಯ ಪರಿಣಾಮದಿಂದ ಉಂಟಾಗುತ್ತಿರುವ ಒತ್ತಡ, ಬೊಜ್ಜು, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ತೊಂದರೆಗಳಿಂದ ಮುಕ್ತಿ ಹೊಂದಿ ಸದೃಡ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಅವಶ್ಯಕ ಎಂದು ಮಣಿಪಾಲದ ಮಣಿಪಾಲ್ ಅಕಾಡೆಮಿ ಅಫ್ ಹೈಯರ್ ಎಜುಕೇಷನ್‌ನ ಸಿ.ಐ.ಎಮ್.ಅರ್‌ನ ಯೋಗ ವಿಭಾಗದ ಮುಖ್ಯಸ್ಥೆ  ಡಾ. ಅನ್ನಪೂಣ೯ ಕೆ. ಹೇಳಿದರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿ ಕೊಂದಿದ್ದ ವಿಶ್ವ ಯೋಗ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಯೋಗವು ಯಾವುದೇ ಒಂದು ಧಮ೯ಕ್ಕೆ ಸೀಮಿತವಲ್ಲ ಹಾಗೂ ಯೋಗ ಕೇವಲ ಒಂದು ವ್ಯಾಯಾಮವಲ್ಲ. 
ಇದು ನಮ್ಮನ್ನು ನಾವು ವಿಶ್ವಕ್ಕೆ ಅಪಿ೯ಸಿಕೊಳ್ಳುವ ಸಾಧನವಾಗಿದೆ. ವಿದ್ಯಾಥಿ೯ಗಳು ತಮ್ಮ ಅಧ್ಯಯನದಲ್ಲಿ ಏಕಾಗ್ರತೆ ಹೊಂದಲು ಶಿಸ್ತುಬದ್ದವಾದ ಯೋಗಾಭ್ಯಾಸ ಅವಶ್ಯಕ ಎಂದು ಹೇಳಿದರು.
 ಕಾಲೇಜಿನ ಪ್ರಾಂಶುಪಾಲೆ  ಪ್ರೊ.(ಡಾ.) ನಿಮ೯ಲ ಹರಿಕೃಷ್ಣ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿದೆ೯ಶಕ ಶ್ರೀ. ಪ್ರಕಾಶ್‌ರಾವ್ ಡಿ. ವಂದನಾಪ೯ಣೆ ಸಲ್ಲಿಸಿದರು. ವಿದ್ಯಾಥಿ೯ನಿ ಕುಮಾರಿ ರೋಚನಿ ರಾವ್ ನಿರೂಪಿಸಿದರು.
 
 
 
 
 
 
 
 
 
 
 

Leave a Reply