ನ್ಯೂ ಫ್ರೆಂಡ್ಸ್ ಕಪ್ಪೆಟ್ಟು ವತಿಯಿಂದ ಐತಿಹಾಸಿಕ ಭವ್ಯ ರಾಮಮಂದಿರದ ಕಲಾಕೃತಿ

ನ್ಯೂ ಫ್ರೆಂಡ್ಸ್ ಕಪ್ಪೆಟ್ಟು ಇದರ ವತಿಯಿಂದ ಸತತ 25 ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ ಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾ ದಿ. ಪಾಂಡು ರವರ ನೇತೃತ್ವದಲ್ಲಿ ಆರಂಭಗೊಂಡು ಇದೀಗ ರಜತ ಸಂಭ್ರಮದ ಆಚರಣೆಯನ್ನು ಆಚರಿಸುತ್ತಿದೆ. 
ಪ್ರಸ್ತುತ ವಿದ್ಯಮಾನಕ್ಕೆ ಪೂರಕವಾಗಿ ಪೈಂಟಿಂಗ್ ನಲ್ಲಿ ಆಕರ್ಷಕ ಚಿತ್ರ ರಚಿಸುವುದು ಈ ಸಂಸ್ಥೆಯ ವೈಶಿಷ್ಟ್ಯ. ಈ ಬಾರಿಯೂ ಸಂಘದ ಸದಸ್ಯರಾದ ಸುಧಾಕರ್ ರವರು, ಸಂಘದ ಸಲಹೆಗಾರರಾದ ಅಜಿತ್ ಕಪ್ಪೆಟ್ಟು ರವರ ಮಾರ್ಗದರ್ಶನದಲ್ಲಿ ಸಹ ಚಿತ್ರಕಾರರಾದ ಹರೀಶ್ ಮತ್ತು ದಯಾನಂದ್ ರವರ ಸಹಕಾರದಿಂದ ಇದೀಗ ಅಯೋಧ್ಯೆ ಯಲ್ಲಿ ನಿರ್ಮಾಣವಾಗುತ್ತಿರುವ ಸಮಸ್ತ ಹಿಂದೂಗಳ ಶ್ರದ್ದಾಕೇಂದ್ರವಾದ ಐತಿಹಾಸಿಕ ಭವ್ಯ ರಾಮಮಂದಿರದ  ಕಲಾಕೃತಿ ಮೂಡಿಬಂದಿದೆ.
ಭಾರತ ಕೃಷಿ ಪ್ರಧಾನ ದೇಶ. ಕೈಗಾರಿಕೆಗಳು ಆರಂಭ ಆಗುವ ಮೊದಲು ಕೃಷಿಯೇ ಬದುಕಿನ ಮೂಲ ಕಸುಬು ಆಗಿತ್ತು. ರೈತರ ಬೆವರಿಗೆ ಕೃಷಿ ಯಾವತ್ತೂ ಮೋಸ ಮಾಡುವುದಿಲ್ಲ. ನಾವು ಸದಾ ಪ್ರಕೃತಿ ಜೊತೆಯೇ ಬದುಕಿದರೆ ನಮ್ಮ ಜೀವನ ಸಾರ್ಥಕ. ಹಡಿಲು ಬಿದ್ದ ಗದ್ದೆಗಳಲ್ಲಿ ಸದಾ ಬೇಸಾಯ ಮಾಡಿದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೆ  ಯಾವುದೂ ಇಲ್ಲ.
ಒಂದು ಚಿತ್ರ ನೂರು ಕಥೆಯನ್ನು ಹೇಳುತ್ತದೆ. ನಾವು ನಮ್ಮ ಮಕ್ಕಳಿಗೆ ಚಿತ್ರ ಕಲೆಯ ಮಹತ್ಯ ಹೇಳೋಣ. ಚಿತ್ರಗಳ ಜೊತೆ ಅವರ ಬುದ್ಧಿ ವಿಕಸನಗೊಳಿಸೋಣ ಎಂಬ ಹಂಬಲದೊಂದಿಗೆ ಮುನ್ನಡೆಯುತ್ತಿರುವ ನ್ಯೂ ಫ್ರೆಂಡ್ಸ್ ಕಪ್ಪೆಟ್ಟು ಸದಸ್ಯರು ಹೊಸ ಹೊಸ ಯೋಜನೆಗೆ
ಸಿದ್ದ ಹಸ್ತರು.  
 
 
 
 
 
 
 
 
 
 
 

Leave a Reply