ಸಾಧನೆಯಿಂದ ಸಾಧಕ ಮಾತನಾಡಬೇಕು~ ಕುಸುಮಾ ನಾಗರಾಜ್

ಉಡುಪಿ: ಭಗವಂತ ಸೃಷ್ಟಿಸಿದ ಜಗತ್ತಿನಲ್ಲಿ ಕಲಾ ಪ್ರಪಂಚವನ್ನೇ ನಿರ್ಮಿಸುವ ಕಲಾವಿದರು ಕಲಾಕೃತಿಗಳ ಮೂಲಕ ಸಮಾಜಕ್ಕೆ ನೀಡುವ ಸಂದೇಶದಿಂದ ಜನರ ಬದುಕು, ಮನೋಭಾವ ಬದಲಾಗಬೇಕು ಎಂದು ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಆಡಳಿತಾಧಿಕಾರಿ ಕುಸುಮಾ ನಾಗರಾಜ್ ಆಶಿಸಿದರು.

ಕಲಾವಿದ ಹರೀಶ್ ನಾಯ್ಕ್ ಉಡುಪಿ ಅವರಿಂದ ನಗರದ ಸಿಟಿ ಬಸ್ ನಿಲ್ದಾಣ ಬಳಿಯ ಚಿತ್ರಕಲಾ ಮಂದಿರ ಕಲಾ ಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾದ ರೆಸೊನೆನ್ಸ್ (ಪ್ರತಿಧ್ವನಿ) ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಸವಿದು ಅರಿಯಬೇಕು
ಬೆಲ್ಲವನ್ನು ನೋಡಿದ ಮಾತ್ರಕ್ಕೆ ರುಚಿ ಗೊತ್ತಾಗದು, ಅಂತೆಯೇ ಕಲೆಯನ್ನು ಕಂಡು ಸವಿದು ಕಲಾಕೃತಿ ಗಳೊಳಗಿನ ಸಂದೇಶ ಅರಿಯಬೇಕು. ಸಾಧಕನಿಗೆ ಸಾವಿಲ್ಲ, ಸಾಧನೆಗೆ ಮರಣವಿಲ್ಲ. ಸಾಧನೆಯಿಂದ ಸಾಧಕ ಮಾತನಾಡಬೇಕು ಎಂದರು.

ಚಿತ್ರಕಲಾ ಮಂದಿರ ಕಲಾಶಾಲೆ ನಿರ್ದೇಶಕ ಡಾ. ಯು. ಸಿ. ನಿರಂಜನ್ ಮಾತನಾಡಿ ಕಲೆಗೆ ಸಮಾಜ, ಸರಕಾರ, ಸಂಘಸಂಸ್ಥೆಗಳ ಪ್ರೋತ್ಸಾಹವಿದ್ದರೆ ಉತ್ಕೃಷ್ಟತೆ ಕಾಣಲು ಸಾಧ್ಯ. ಅವಕಾಶ ಸೃಷ್ಟಿ ಜೊತೆಗೆ ಲಭಿಸಿದ ಅವಕಾಶದ ಸದ್ಬಳಕೆ ಮಾಡ ಬೇಕು ಎಂದರು.

ಹೋಟೆಲ ವೈಟ್ ಲೋಟಸ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಪಿ. ಶೆಟ್ಟಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಸದಸ್ಯ ರಾಘ ವೇಂದ್ರ ಕೆ. ಅಮೀನ್, ಚಿತ್ರಕಲಾ ಮಂದಿರ ಕಲಾಶಾಲೆ ಪ್ರಾಂಶು ಪಾಲ ರಾಜೇಂದ್ರ ಪೂಜಾರಿ ತ್ರಾಸಿ ಮಾತ ನಾಡಿದರು.

ಪ್ರದೀಪ್ ಕುಮಾರ್ ನಿರೂಪಿಸಿ, ಸ್ವಾಗತಿಸಿದರು. ಹರೀಶ್ ನಾಯ್ಕ್ ವಂದಿಸಿದರು.

 
 
 
 
 
 
 
 
 
 
 

Leave a Reply