ಉಡುಪಿ ಜಿಲ್ಲಾಯುವ ಬ್ರಾಹ್ಮಣ ಪರಿಷತ್ (ರಿ.) ಶಿರೂರು ಶ್ರೀಗಳಿಂದ ಮನೆ ಹಸ್ತಾಂತರ

ಉಡುಪಿ ಜಿಲ್ಲಾಯುವ ಬ್ರಾಹ್ಮಣ ಪರಿಷತ್ (ರಿ.) ವತಿಯಿಂದ ಸುಮಾರು 10ಲಕ್ಷ ರೂ. ಮೌಲ್ಯದ ಮಾತೃಪ್ರಿಯ ಮನೆಯನ್ನು ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ 25ನೇ ವರ್ಷದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯ ಸುಸಂದರ್ಭದಲ್ಲಿ ಸವಿನೆನಪಿಗಾಗಿ ಪರಮಪೂಜ್ಯ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ರಾಮರಾಜ್ಯದ ಪರಿಕಲ್ಪನೆಯಿಂದ ಪ್ರೇರೇಪಣೆಗೊಂಡು ಸಂಕಲ್ಪಿಸಿದಂತೆ ಸಮಾಜದ ಆರ್ಥಿಕವಾಗಿ ಹಿಂದುಳಿದ ಮತ್ತು ಸಮಸ್ಯೆಯಲ್ಲಿರುವ ಅಶ್ವಿನಿ ಭಟ್ ಇವರಿಗೆ ಚಿಟ್ಟಾಡಿ ಭಾಗ್ಯಮಂದಿರ ಪರಿಸರದಲ್ಲಿ ಶ್ರೀ ಶೀರೂರು ಮಠಾಶರಾದ ಪರಮಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಗುರುವಾರ ಹಸ್ತಾಂತರಿಸಿದರು.

ಅವರು ಆಶೀರ್ವಚನ ನೀಡಿ, ಪರಿಷತ್ ಕಾರ್ಯಕ್ರಮವನ್ನು ಶ್ಲಾಘಿಸಿ, ಇಂತಹ ಸಮಾಜ ಮುಖಿ ಕಾರ್ಯಗಳನ್ನು ಮತ್ತು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆ ಎತ್ತುವ ಕಾರ್ಯ ನಿರಂತರ ಮಾಡಲಿ ಎಂದರು. ಬೆಳಿಗ್ಗೆ ಪೇಜಾವರ ಶ್ರೀಪಾದರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಮನಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮನೆಯನ್ನು ನಿರ್ಮಿಸಲು ಸಹಕರಿಸಿದ ಪ್ರಮೋದ್ ತಂತ್ರಿ ಮತ್ತು ಚೈತನ್ಯ ಎಂ.ಜಿ, ಅವರನ್ನು ಗೌರವಿಸ ಲಾಯಿತು. ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ. ಎನ್. , ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ , ಕೋಶಾಕಾರಿ ಕುಮಾರಸ್ವಾಮಿ ಉಡುಪ, ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ. ಜಿ., ವಿಷ್ಣು ಪಾಡಿಗಾರ್ ಮತ್ತು ಪರಿಷತ್‌ನ ಹಿರಿಯ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ರಮೇಶ್ ಭಟ್ ಮೂಡು ಬೆಟ್ಟು ಮೂಡುಬೆಟ್ಟು ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿವಿಧಾನಗಳೊಂದಿಗೆ ನಡೆಯಿತು.

 
 
 
 
 
 
 
 
 
 
 

Leave a Reply