ಬಿದ್ಕಲ್‍ ಕಟ್ಟೆಯಲ್ಲಿ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಗಾರ

 ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಮತ್ತು ಮಣಿಪಾಲದ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಇವರ ಜಂಟಿ ಆಶ್ರಯದಲ್ಲಿ ಮಹಿಳೆಯರಿಗೆ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮವು ಗುರುವಾರ ಬಿದ್ಕಲ್‍ಕಟ್ಟೆಯ ಹಾರ್ದಳ್ಳಿ ಮಂಡಳಿ ಗ್ರಾಮ ಪಂಚಾಯತ್‍ನಲ್ಲಿ ಜರುಗಿತು.

 ಮುಖ್ಯ ಅತಿಥಿಯಾಗಿದ್ದ ಮಣಿಪಾಲದ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್‍ನ ಹಿರಿಯ ವ್ಯವಸ್ಥಾಪಕಿ ಪ್ರಭಾ ಹೆಚ್.ಎಸ್ ಮಾತನಾಡಿ ಸ್ವಉದ್ಯೋಗ ಪ್ರಾರಂಭಿಸಲು ಬಯಸುವ ಮಹಿಳೆಯರು ಹೆಚ್ಚಿನ ಉಳಿತಾಯ ಮಾಡಿ ಸ್ವಉದ್ಯೋಗಕ್ಕೆ ಉಪಯೋಗಿಸುವುದರಿಂದ ಯಶಸ್ಸು ಗಳಿಸಿ ಅಭಿವೃದ್ಧಿಯ ಪಥದತ್ತ ಸಾಗಬಹುದು ಎಂದರು.

ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ.ಧನಂಜಯ ಮತಾನಾಡಿ ಮಲ್ಲಿಗೆ ಕೃಷಿ ಉತ್ತಮ ಆದಾಯ ತರುವ ಕೃಷಿ ಚಟುವಟಿಕೆಯಾಗಿದ್ದು ವೈಜ್ಞಾನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು. 

ಡಾ.ಚೈತನ್ಯ ಮಾತಾನಾಡಿ ಮಲ್ಲಿಗೆ ಗಿಡಗಳ ನಾಟಿ ಮಾಡುವ ವಿಧಾನ, ಅದರ ಆರೈಕೆ ಮತ್ತು ನೀಡಬೇಕಾದ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಮೊದಲಿಗೆ ಭಾರತೀಯ ವಿಕಾಸ ಟ್ರಸ್ಟ್‍ನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಸ್ವಾಗತಿಸಿದರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಕೊನೆಯಲ್ಲಿ 5 ಮಹಿಳೆಯರಿಗೆ ಮಲ್ಲಿಗೆ ಗಿಡಗಳನ್ನು ವಿತರಿಸಲಾಯಿತು.

 
 
 
 
 
 
 
 
 
 
 

Leave a Reply